ಆಂಧ್ರ ಪ್ರದೇಶ: ಪತಿಯನ್ನು ಬರ್ಬರವಾಗಿ ಹತ್ಯೆಗೈದ ಪತ್ನಿ ಆತನ ರುಂಡವನ್ನು ಪೊಲೀಸ್ ಠಾಣೆಗೆ ತಂದ ಭಯಾನಕ ಘಟನೆ ತಿರುಪತಿ ಜಿಲ್ಲೆಯ ರಾಣಿಗುಂಟ್ ಪ್ರದೇಶದಲ್ಲಿ ವರದಿಯಾಗಿದೆ.
ರವಿಚಂದ್ರ (55) ಹತ್ಯೆಯಾದ ಪತಿ. ಆರೋಪಿ ಪತ್ನಿ ವಸುಂಧರಾ ಹಾಗೂ ಮೃತ ರವಿಚಂದ್ರ 25 ವರ್ಷಗಳ ಹಿಂದೆ ವಿವಾಹ ಆಗಿದ್ದರು.
ಈ ದಂಪತಿಗೆ 25 ವರ್ಷದ ಮಗ ಇದ್ದಾನೆ. ಇತ್ತೀಚಿಗೆ ಗಂಡನ ಮೇಲೆ ತೀವ್ರ ಅನುಮಾನ ಪಡುತ್ತಿದ್ದ ಪತ್ನಿ ಮೊನ್ನೆ ಪತಿಯ ಜೊತೆ ಜಗಳವಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಜಗಳ ತಾರಕಕ್ಕೇರಿದ್ದು ಪತ್ನಿ ಗಂಡನನ್ನು ಕೊಲೆ ಮಾಡಿದ್ದಾಳೆ.
ಆ ಬಳಿಕ ಪತಿಯ ರುಂಡವನ್ನು ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿಕೊಂಡು ಆಟೋದಲ್ಲಿ ಪೊಲೀಸ್ ಸ್ಟೇಷನ್ ದಾರಿ ಹಿಡಿದಿದ್ದಾಳೆ. ಕೈಯಲ್ಲಿ ಪತಿಯ ರುಂಡ ಹಿಡಿದು ಬಂದ ಈಕೆಯನ್ನು ಕಂಡು ಪೊಲೀಸರು ಅರೆ ಕ್ಷಣ ಶಾಕ್ಗೆ ಒಳಗಾಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗಂಡನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುಪತಿಯ ರೂಯಿ ಆಸ್ಪತ್ರೆಗೆ ರವಾನಿಸಿದ್ದಾರೆ.
Discussion about this post