”ಹೂ ಅಂತೀಯಾ ಮಾವ, ಹೂಹೂ ಅಂತಿಯಾ ಮಾವ” ಈ ಹಾಡು ಈಗ ಎಲ್ಲರ ಮನಸಿನಲ್ಲಿ ಗುನುಗುತ್ತಿರೋ ಕಲರ್ಫುಲ್ ಗೀತೆ. ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಆಯಪಲ್ ಬ್ಯೂಟಿ ಸಮಂತಾ ಸಖತ್ ಆಗಿಯೇ ಕುಣಿದು ಕುಪ್ಪಳಿಸಿದ್ದಾರೆ. ಅಷ್ಟಕ್ಕೂ ಅಷ್ಟೊಂದು ಅದ್ಭುತವಾಗಿ ಸಮಂತಾ ಡ್ಯಾನ್ಸ್ ಮಾಡಲು ಪೂರ್ವ ತಯಾರಿ ಎಷ್ಟ ಮಟ್ಟಿಗೆ ಮಾಡಿದ್ರು ಗೊತ್ತಾ.?
ಈ ಸ್ಟೋರಿ ನೋಡಿ ಸಮಂತಾ ಡಿಡೆಕೇಷನ್ ಎಂಥಾದ್ದು ಅನ್ನೋದು ಗೊತ್ತಾಗುತ್ತೆ.
ಮೈ ತುಂಬಾ ಮಾದಕತೆಯನ್ನ ತುಂಬಿಕೊಂಡು ”ಹೂ ಅಂತೀಯಾ ಮಾವ, ಹೂಹೂ ಅಂತಿಯಾ ಮಾವ” ಅಂತ ಅಲ್ಲು ಅರ್ಜುನ್ ಜೊತೆಗೆ ಕುಣಿದು ಪಡ್ಡೆ ಹುಡ್ಗರ ನಿದ್ದಿ ಕದ್ದವರೇ ಸಮಂತಾ. ಎಲ್ಲ್ ನೋಡಿದ್ರು ಈಗ ಇದೇ ಹಾಡಿನ ವೈಯಾರದ ಗಾನಾವಳಿ.
ತನ್ನ ಗಂಡನ್ ಜೊತೆ ಚಾಲಿ ಟು ಬಿಟ್ಟು ಒಂದು ರೌಂಡ್ ಉತ್ತರ ಭಾರತವನ್ನ ಸುತ್ಕೊಂಡು ಪುಷ್ಪ ಸಿನಿಮಾ ಸೆಟ್ಗೆ ಬಹುಬೇಡಿಕೆಯ ಮೇರೆಗೆ ಬಂದ್ರು ಸಮಂತಾ. ಅಲ್ಲು ಅರ್ಜುನ್ ನಟನೆಯ ”ಪುಷ್ಪ” ಸಿನಿಮಾದ ಐಟಂ ಸಾಂಗ್ ಒಂದರಲ್ಲಿ ಆಯಪಲ್ ಬ್ಯೂಟಿ ಕುಣಿತಾರೆ ಅಂದಾಗಲೇ ಚಿತ್ರರಸಿಕರಲ್ಲಿ ಸಂಚಲನವನ್ನ ಮೂಡಿಸಿತ್ತು. ಇನ್ನು ಹಾಡು ಹೊರ ಬಂದ ನಂತರ ಕೋಟಿ ವಿವ್ಸ್ ಆಗುತ್ತಿದೆ.
ಸಮಂತಾ ಎಷ್ಟು ಬ್ಯೂಟಿಯೋ ಅಷ್ಟೇ ಬ್ಯೂಟಿಫುಲ್ ಆರ್ಟಿಸ್ಟ್ ಅನ್ನೋದು ಈಗಾಗಲೇ ಸಾಬೀತಾಗಿದೆ. ಆದ್ರೆ ಈ ಪುಷ್ಪ ಸಿನಿಮಾದಲ್ಲಿ ಬರೋ ಐಟಂ ಸಾಂಗ್ಗೆ ಇಷ್ಟೊಂದು ಪಸಂದ್ ಆಗಿ ಹೆಂಗ್ ಕುಣಿದ್ರು ಅನ್ನೋ ಕುತೂಹಲ ಎಲ್ಲರಲ್ಲಿತ್ತು. ಈಗ ಆ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಸಮಂತಾ ಪುಷ್ಪ ಸಿನಿಮಾದ ಸೆಟ್ಗೆ ಹೋಗೋಕ್ಕು ಮುನ್ನ ಎಷ್ಟು ಕಷ್ಟ ಪಟ್ಟು ಪೂರ್ವ ತಯಾರಿ ಮಾಡಿದ್ರು ಅನ್ನೋದನ್ನ ಬ್ಯೂಟಿಫುಲ್ ವಿಡಿಯೋ ಮೂಲಕ ಹೊರ ಬಿಟ್ಟಿದ್ದಾರೆ ಸಮಂತಾ.
ದೇವಿ ಶ್ರೀ ಪ್ರಸಾದ್ ಸಂಗೀತ ಕಲ್ಪನೆಯಲ್ಲಿ ಕರ್ನಾಟಕ ಮೆಚ್ಚಿರುವ ತೆಲುಗು ಸಿಂಗರ್ ಸತ್ಯವತಿ ಮಂಗ್ಲಿ ಗಾಯನದಲ್ಲಿ ಮೂಡಿಬಂದಿರುವ Oo Antava Oo Oo Antava ಸಾಂಗ್ ಗಣೇಶ್ ಆಚಾರ್ಯ ಕೊರಿಯೋಗ್ರಫಿ ಮಾಡಿದ್ದಾರೆ. ಈ ಹಾಡಿನ ಕುಣಿತ ಕಾಗುಣಿತವನ್ನ ಬರೋಬ್ಬರಿ ನಾಲ್ಕು ದಿನ ಪ್ರಾಕ್ಟಿಸ್ ಮಾಡಿ ಶೂಟಿಂಗ್ ಸ್ಪಾಟ್ಗೆ ಬಂದೌವ್ರೆ ಸಮಂತಾ.
ಈ ಹಾಡಿನಿಂದ ಸಮಂತಾ ರುತ್ ಪ್ರಭು ಖ್ಯಾತಿ ಮತಷ್ಟು ಹೆಚ್ಚಾಗಿದೆ. ಸೌಥ್ ಸಿನಿಮಾ ಮಾರುಕಟ್ಟೆಗಿಂತ ಒಂದು ಕೈ ಜಾಸ್ತಿ ಬಾಲಿವುಡ್ ಲೋಕದಿಂದ ಸ್ಯಾಮ್ಸ್ ಗೆ ಅವಕಾಶಗಳ ಸುರಿಮಳೆ ಬರ್ತಿವೆ. ಆದ್ರೆ ಸಂಮತಾ ಮಾತ್ರ ಅಳೆದ ತೂಗಿ ಆಯ್ಕೆಮಾಡ್ತಿದ್ದಾರೆ.
Discussion about this post