ಬೆಂಗಳೂರು: ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿ ಕೆಲಸ ಮಾಡಿದ್ದಾರೆ, ರಾಜಕೀಯವಾಗಿ ಅಪಾರ ಜವಾಬ್ದಾರಿ ಹೊಂದಿದ್ದಾರೆ. ಪಾದಯಾತ್ರೆಗೆ ನಮ್ಮ ವಿರೋಧ ಇಲ್ಲ, ಪಾದಯಾತ್ರೆ ಅಲ್ಲದಿದ್ರೆ, ಮ್ಯಾರಥಾನ್ ಮಾಡಲಿ ಆದ್ರೆ ಮೂರು ತಿಂಗಳ ಬಳಿಕ ಮಾಡಲಿ ಎಂದರು.
ಕೊರೊನಾ ಉಲ್ಬಣವಾಗುತ್ತಿರುವ ಹೊತ್ತಲ್ಲಿ ಪಾದಯಾತ್ರೆ ಬೇಡ, ಬೇಕಿದ್ರೆ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಪಾದಯಾತ್ರೆ ಮಾಡಲಿ ಎಂದರು. ಅಲ್ಲದೇ ಬಿಬಿಎಂಪಿ ಚುನಾವಣೆ ಬಂತು ಅಂತಾ ಹೀಗೆ ಮಾಡುತ್ತಿದ್ದಾರಾ ಅಂತಾ ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದ್ರು.
ವಿಶ್ವ ಆರೋಗ್ಯ ಸಂಸ್ಥೆ ವಿಶೇಷ ಸಭೆ..
ಕೊರೊನಾ ನಿಯಂತ್ರಣ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ವಿಶೇಷ ಸಭೆ ಕುರತಂತೆ ಮಾಹಿತಿ ಹಂಚಿಕೊಂಡ ಸಚಿವರು, ಒಂದು ರಾಜ್ಯ ಅಥವಾ ದೇಶದಲ್ಲಿ ಸಂಪೂರ್ಣ ಲಸಿಕೆ ಕೊಡುವುದರ ಮೂಲಕ ಈ ರೋಗ ತಡೆಯಲು ಸಾಧ್ಯವಿಲ್ಲ. ಇಡೀ ವಿಶ್ವವೇ ಸಂಪೂರ್ಣ ಲಸಿಕೆ ಪಡೆದುಕೊಂಡರೇ ಅಷ್ಟೇ ರೋಗ ಮಣಿಸಲು ಸಾಧ್ಯ. ಪ್ರಧಾನಿ ಮೋದಿ ನರೇಂದ್ರ ನಿರ್ಧಾರ ಕೂಡ ಇದೆ ಆಗಿತ್ತು. ಇದನ್ನು 6 ತಿಂಗಳ ಹಿಂದೆ ಮೋದಿ ಗಮನಿಸಿದ್ದಾರೆ. ಉಚಿತವಾಗಿ ಅನೇಕ ಬಡ ದೇಶಗಳಿಗೆ ಲಸಿಕೆ ಸರಬರಾಜು ಮಾಡಿದ್ದಾರೆ. ಹೀಗಾಗಿ ನರೇಂದ್ರ ಮೋದಿ ನಾಯಕತ್ವಕ್ಕೆ ವಿಶ್ವಸಂಸ್ಥೆ ಪ್ರಶ್ರಂಸೆ ಮಾಡಿದೆ. ಕೆಲವು ದೇಶದಲ್ಲಿ 10% ಕೂಡ ಆಗಿಲ್ಲ. ಸಣ್ಣ ಸಣ್ಣ ದೇಶ ನಾಲ್ಕನೇ ಡೋಸ್ ಹಾಕಿಸಿದ್ರೂ ಉಪಯೋಗ ಇಲ್ಲ. ಎರಡನೇ ಅಂಶ ಎಂದರೇ ಒಮಿಕ್ರಾನ್ ಪ್ರಾರಂಭದಲ್ಲಿ ಸಿಮ್ಯಾರಿಟಿ ಇಲ್ಲ ಎಂಬುದು ಸತ್ಯ. ಎರಡೂ ಡೋಸ್ ಪಡೆಯದೇ ಇದ್ದರೇ ತೀವ್ರತೆ ಹೆಚ್ಚು ಇರುತ್ತೆ. ಸಾವು ಕೂಡ ಸಂಭವಿಸುವ ಸಾಧ್ಯತೆ ಎಂದು ಎಚ್ಚರಿಕೆ ನೀಡಿದರು.
Discussion about this post