ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದ್ದು, ನಂಜನಗೂಡಿನ ಪರಶುರಾಮ ದೇವಾಲಯದ ಸುತ್ತ ಪ್ರವಾಹದ ನೀರು ಆವರಿಸಿದೆ. ಕಪಿಲಾ ನದಿ ತೀರದ ಸ್ನಾನಘಟ್ಟ, ಮುಡಿಕಟ್ಟೆ, ಅಯ್ಯಪ್ಪ ಸ್ವಾಮಿ ದೇಗುಲದ ಮೆಟ್ಟಿಲುಗಳು ಮುಳುಗಡೆಯಾಗಿದ್ದು, ಇಲ್ಲಿಗೆ ಭಕ್ತಾಧಿಗಳು ತೆರಳದಂತೆ ನಿರ್ಬಂಧ ವಿಧಿಸಲಾಗಿದೆ. ಕಪಿಲಾ ತೀರಕ್ಕೆ ಸಾರ್ವಜನಿಕರು ಮತ್ತು ಭಕ್ತರು ತೆರಳದಂತೆ ಖಾಕಿ ಕಣ್ಗಾವಲು ಇಟ್ಟಿದ್ದು, ನಂಜನಗೂಡಿನ ಹಳ್ಳದ ಕೇರಿ ಬಡಾವಣೆಯಲ್ಲಿರುವ ಸಾಕಷ್ಟು ಮನೆಗಳು ಜಲಾವೃತಗೊಂಡಿವೆ. ಇನ್ನ ತೋಪಿನ ಬೀದಿ, ಹಳ್ಳದಕೇರಿ, ಒಕ್ಕಲಗೇರಿ ಬಡಾವಣೆಗಳಿಗೆ ಮಳೆ ನೀರು ನುಗ್ಗಿದ್ದು, ಹಳ್ಳದಕೇರಿ ಬಡಾವಣೆ ಜನರು ತಮ್ಮ ಮನೆ ಸಾಮಗ್ರಿಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದ್ದಾರೆ. ಅಲ್ದೆ ನಂಜನಗೂಡು ತಹಶೀಲ್ದಾರ್ ಆದೇಶದ ಮೇರೆಗೆ ಕಪಿಲಾ ನದಿಯ ಸುತ್ತಮುತ್ತಲಿನ ಅಂಗಡಿ, ಮಳಿಗೆಗಳನ್ನು ತೆರವುಗೊಳಿಸಲಾಗಿದೆ.
Discussion about this post