14ನೇ ಆವೃತ್ತಿಯ ಬಳಿಕ ಐಪಿಎಲ್ನ ಆರ್ಸಿಬಿ ತಂಡದ ನಾಯಕತ್ವ ಸ್ಥಾನದಿಂದ ಕೆಳಿಗಿಳಿದಿರುವ ವಿರಾಟ್ ಕೊಹ್ಲಿ, ಇದೀಗ ಮತ್ತೊಮ್ಮೆ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಭಾರತದ ಮಾಜಿ ವೇಗಿ ಅಜಿತ್ ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಗರ್ಕರ್, ಕೊಹ್ಲಿ ಮತ್ತೆ ನಾಯಕನಾಗಲು ಸಜ್ಜಾಗಿದ್ದಾರೆ. ಹಾಗಾಗಿ ಅವರನ್ನೇ ಮತ್ತೊಮ್ಮೆ ನಾಯಕನಾಗಿ ನೇಮಕ ಮಾಡಿದರೆ ತಂಡವನ್ನು ನಿರ್ವಹಿಸಲು ಸುಲಭವಾಗಲಿದೆ ಎಂದು ಹೇಳಿದ್ದಾರೆ.
ಫ್ರಾಂಚೈಸಿ ಕೂಡ ಕೊಹ್ಲಿ ಜೊತೆಗೆ ಮಾತುಕತೆ ನಡೆಸಬೇಕು. ಮತ್ತೆ ತಂಡದ ಜವಾಬ್ದಾರಿ ಹೊತ್ತುಕೊಳ್ಳಲು ಆಸಕ್ತಿ ಇದೆಯಾ ಎಂಬುದನ್ನು ಕೇಳಬೇಕು. ಆ ಮೂಲಕ ಫ್ರಾಂಚೈಸಿಗೆ ಇರುವ ಗೊಂದಲಗಳನ್ನು ನಿವಾರಣೆಗೆ ಮುಂದಾಗಬೇಕು ಎಂದು ತಿಳಿಸಿದ್ದಾರೆ.
ಇನ್ನು ಆರ್ಸಿಬಿ ಕೆಲ ಆಟಗಾರರನ್ನು ದುಬಾರಿ ಮೊತ್ತಕ್ಕೆ ಖರೀದಿಸಿದ ಮಾತ್ರಕ್ಕೆ ಚಾಂಪಿಯನ್ ಆಗೋಕೆ ಸಾಧ್ಯವಾಗೋದಿಲ್ಲ. ಇದನ್ನು ಫ್ರಾಂಚೈಸಿ ಮನವರಿಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ಬಲ ತುಂಬುವ ಆಟಗಾರರ ಮೇಲೆ ಹೆಚ್ಚಿನ ಹಣ ಕೊಟ್ಟಾದರೂ ಖರೀದಿಸಿ. ಆದ್ರೆ ಡೆಪ್ತ್ ಇಲ್ಲದ ಆಟಗಾರರಿಗೆ ಸುಖಾಸುಮ್ಮನೆ ಹಣ ಸುರಿಯಬೇಡಿ ಎಂದು ಸಲಹೆ ನೀಡಿದ್ದಾರೆ.
Discussion about this post