ಚಲಿಸುತ್ತಿದ್ದ ರೈಲಿಗೆ ಸಿಲುಕಿ ಕುರಿಗಾಯಿ ಮತ್ತು ಕುರಿಗಳು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಾಲಹಳ್ಳಿ ಸಮೀಪ ನಡೆದಿದೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಗೋಲ್ ಗುಂಬಸ್ ಎಕ್ಸ್ಪ್ರೆಸ್ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ರೈಲು ಆಗಮಿಸುವ ವೇಳೆ ರೈಲ್ವೆ ಹಳಿ ಬಳಿ ಮೇಯುತ್ತಿದ್ದ ಕುರಿಗಳು ರೈಲು ಹತ್ತಿರ ಬಂದ ತಕ್ಷಣ ಗಾಬರಿಯಾಗಿ ರೈಲ್ವೆ ಹಳಿಗೆ ಬಂದಿವೆ. ಇದನ್ನ ಗಮನಿಸಿದ ಕುರಿಗಾಯಿ ಕುರಿಗಳನ್ನ ಓಡಿಸಲು ರೈಲ್ವೆ ಹಳಿ ಬಳಿ ಬಂದಿದ್ದಾನೆ. ಈ ವೇಳೆ ರೈಲಿಗೆ ಸಿಲುಕಿ ಕುರಿಗಾಹಿ ಹಾಗೂ ಕುರಿಗಳು ಮೃತಪಟ್ಟಿವೆ, ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Discussion about this post