ಫೆಬ್ರವರಿ ಅಂದಾಕ್ಷಣ ಫಟಾಫಟ್ ಅಂತ ನೆನಪಾಗೋದು ವ್ಯಾಲೈಂಟೈನ್ಸ್ ಡೇ. ಎಷ್ಟೋ ವರ್ಷಗಳಿಂದ ಪ್ರೀತಿಸುತ್ತಿರುವ ಪ್ರೇಮಿಗಳು ತಮ್ಮ ಪ್ರೀತಿಯನ್ನು ಹೇಳಿಕೊಳ್ಳುವ ದಿನವಾಗಿದೆ. ಫೆಬ್ರವರಿ 7ರಿಂದ 21ರವರೆಗೂ ವಿಭಿನ್ನ ವಿಭಿನ್ನವಾಗಿ ವ್ಯಾಲೈಂಟೈನ್ಸ್ ಡೇ ಸೆಲೆಬ್ರೆಷನ್ ಮಾಡುತ್ತಾರೆ.
ನಾವು ಇದೀಗ ಫೆಬ್ರವರಿ 12 ಹಗ್ ಡೇ ಸೆಲೆಬ್ರೆಷನ್ ಅಲ್ಲಿ ಇದ್ದೀವಿ. ಹಗ್ ಡೇ ಪ್ರೀತಿ ಮತ್ತು ವಾತ್ಸಲ್ಯದ ಸಂಕೇತವಾಗಿದೆ. ಲವರ್ಸ್ ತಮ್ಮ ಲೈಫ್ ಪಾರ್ಟ್ನರ್ಸ್ ಜೊತೆ ಈ ವಿಶೇಷ ದಿನವನ್ನು ಆಚರಿಸುತ್ತಾರೆ. ಈ ದಿನದಂದು ಲವರ್ಸ್ ಅಂತು ಹಗ್ ಮಾಡುವ ಅವಕಾಶವನ್ನು ಎಂದು ಕಳೆದುಕೊಳ್ಳಲು ಇಷ್ಟ ಪಡಲ್ಲ. ಈ ದಿನದಂದು ನಮ್ಮ ಲೈಫ್ ಪಾರ್ಟನರ್ ಹಗ್ ಮಾಡಿ ಪ್ರೀತಿಯನ್ನು ಆಚರಿಸುವ ಮಾರ್ಗವಾಗಿದೆ.
ಈ ಹಗ್ ಡೇಯಿಂದ ಸಂಬಂಧ ಇನ್ನಷ್ಟು ಬಿಗಿಯಾಗುತ್ತದೆ ಎಂದು ತುಂಬಾ ಪ್ರೇಮಿಗಳ ನಂಬಿಕೆಯಾಗಿದೆ. ಈ ಹಗ್ ಡೇ ಕೇವಲ ಲವರ್ಸ್ಗೆ ಮಾತ್ರ ಸೀಮಿತವಾಗಿಲ್ಲ. ಮದುವೆಯಾದ ದಂಪತಿ ತಮ್ಮ ಪ್ರೀತಿಯನ್ನು ಸಂಗಾತಿಗೆ ಹಗ್ ಮಾಡಿ ಹೇಳಬಹುದಾಗಿದೆ. ಹಗ್ ಡೇ ಪ್ರೀತಿ, ವಾತ್ಸಲ್ಯ ಮತ್ತು ಕಾಳಜಿಯ ಸಂಕೇತ ಎನ್ನಬಹುದು.
Discussion about this post