ಚಲಿಸುತ್ತಿದ್ದ ರೈಲನ್ನ ಹತ್ತಲು ಹೋಗಿ ರೈಲು ಪ್ಲಾಟ್ಫಾರ್ಮ್ ಮೇಲೆ ಬಿದ್ದ ಪ್ರಯಾಣಿಕನನ್ನ ರೈಲು ಭದ್ರತಾ ಪಡೆಯ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಈ ಘಟನೆ ಮಹಾರಾಷ್ಟ್ರದ ವಾಸಯ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಸಂಚರಿಸುತ್ತಿದ್ದ ರೈಲನ್ನ ಹತ್ತಲು ಓರ್ವ ವ್ಯಕ್ತಿ ಪ್ರಯತ್ನ ಮಾಡಿದ್ದಾರೆ.
ಈ ವೇಳೆ ಆಯತಪ್ಪಿ ಆತ ಪ್ಲಾಟ್ಫಾರ್ಮ್ ಮೇಲೆ ಬಿದ್ದಿದ್ದಾನೆ. ಪರಿಣಾಮ ಆ ವ್ಯಕ್ತಿ ಟ್ರೈನ್ ಜೊತೆಗೆ ಸ್ವಲ್ಪ ದೂರ ಬಂದಿದ್ದಾನೆ. ಇದನ್ನ ಗಮನಿಸಿದ ಜವಾನ ಕೂಡಲೇ ಕಾರ್ಯಪ್ರವೃತ್ತರಾಗಿ ಅವನನ್ನ ಕಾಪಾಡಿದ್ದಾರೆ.
ಜನವರಿ 23 ರಂದು ಈ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯೋಧನ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
#Maharashtra: #Railway Protection Force jawan rescued a passenger who fell down on platform while trying to board a moving train at Vasai Railway Station on 23rd Jan.
If #TRAIN missed today, it will be found again… जिंदगी ना मिलेगी दोबारा. #USA #Israel #Pakistan #India #Gaza pic.twitter.com/QABH1E5Bel— Vijay kumar🇮🇳 (@vijaykumar1305) January 24, 2022
Discussion about this post