ಹಾವೇರಿ: ಇಲ್ಲಿನ ನೇತಾಜಿ ನಗರದಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ಹ್ಯಾಂಡ್ ಗ್ರೆನೇಡನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿದೆ.
ನಗರದ ಹರೀಶ್ ಮೆಸ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿ ಸಾಕಷ್ಟು ಆತಂಕ ಸೃಷ್ಟಿಸಿತ್ತು.
ವಿಷಯ ತಿಳಿದು ಹುಬ್ಬಳ್ಳಿಯ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗ್ರೆನೇಡ್ನ್ನು ವಶಪಡಿಸಿಕೊಂಡಿತ್ತು. ಸದ್ಯ ವಶಪಡಿಸಿಕೊಂಡ ಗ್ರೆನೇಡ್ಅನ್ನು ದೂರದ ನಿರ್ಜನ ಪ್ರದೇಶದಲ್ಲಿ ಸ್ಫೋಟಿಸಿ ನಿಷ್ಕ್ರಿಯಗೊಳಿಸಿದ್ದಾರೆ.
ಆ ಮೂಲಕ ನಗರದ ನಿವಾಸಿಗಳಲ್ಲಿ ಮನೆ ಮಾಡಿದ್ದ ಆತಂಕವನ್ನು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ದೂರ ಮಾಡಿದ್ದಾರೆ.
Discussion about this post