ಬೆಂಗಳೂರು: ಅದು ಅಂತಿಂಥ ಗ್ಯಾಂಗ್ ಅಲ್ಲ, ಅಸಾಮಾನ್ಯರಲ್ಲೇ ಅಸಾಮಾನ್ಯ ಖತರ್ನಾಕ್ ಗ್ಯಾಂಗ್. ಅವರ ಬಳಿ ಕೋಟಿ ಕೋಟಿ ಗರಿ ಗರಿ ನೋಟು, ಚಿನ್ನದ ಬಿಸ್ಕೆಟ್ಗಳಿದ್ದವು. ಇಷ್ಟಿದ್ರೂ ಅವ್ರು ಕಳ್ಳತನಕ್ಕಿಳಿದಿದ್ದರು. ತಮ್ಮತ್ರ ಇರೋ ನೋಟುಗಳಿಂದಲೇ ಮಿಕಗಳನ್ನು ಖೆಡ್ಡಾಗೆ ಬೀಳಿಸಿ ಲಾಕ್ ಮಾಡ್ತಿದ್ರು.
ಸಾಲು ಸಾಲಾಗಿ ಜೋಡಿಸಿಟ್ಟ ಕಂತೆ ಕಂತೆ ಗರಿ ಗರಿ ನೋಟುಗಳು, ಪಳ ಪಳ ಹೊಳೆಯುತ್ತಿರುವ ಚಿನ್ನದ ಗಟ್ಟಿಗಳು, ಸಾದಾದಿಂದ ಹಿಡಿದು ಬ್ರ್ಯಾಂಡೆಡ್ ಸ್ಮಾರ್ಟ್ಫೋನ್ಗಳು. ಇದ್ಯಾವುದು ಬ್ಯಾಂಕ್ಗೆ ಹೋಗ್ತಿರೋ ದುಡ್ಡಾಗಲಿ ಅಥವಾ ವ್ಯಾಪಾರಕ್ಕಿಟ್ಟ ಮೊಬೈಲ್ ಪೋನೋ ಅಥವಾ ಚಿನ್ನವೇನಲ್ಲ ಕಣ್ರಿ. ಇಲ್ಲಿರೋದೆಲ್ಲ ಹಡ್ರೆಂಡ್ ಪರ್ಸೆಂಟ್ ಪ್ಯೂರ್ ನಕಲಿ ನಕಲಿ ನಕಲಿ.
ಚಿಲ್ಡ್ರನ್ ನೋಟು ತೋರಿಸಿ ಟೋಪಿ ಹಾಕ್ತಿದ್ದ ಗ್ಯಾಂಗ್ ಅಂದರ್!
ನೋಡ್ಲಿಕ್ಕೆ ಜಾತ್ರೆಯಲ್ಲಿ ಬರೋ ಮಕ್ಕಳನ್ನ ಕದಿಯೋರ ತರ ಇರೋ ಇವರೇ ನೋಡಿ ಅಮೃತಹಳ್ಳಿ ಪೊಲೀಸರಿಗೆ ಲಾಕ್ ಆದ ಖತರ್ನಾಕ್ ಗ್ಯಾಂಗ್. ನಟರಾಜ್, ಬಾಲಾಜಿ, ವೆಂಕಟೇಶ್ ಮತ್ತು ರಾಕೇಶ್. ಸದ್ಯ ಇವರಿಂದ ಒಟ್ಟು 5.85 ಲಕ್ಷ ಹಣ, 80 ಗ್ರಾಂ ಚಿನ್ನ, 20 ಕೋಟಿ ನಕಲಿ ನೋಟು, 10 ನಕಲಿ ಗೋಲ್ಡ್ ಬಿಸ್ಕೆಟ್ಗಳನ್ನ ವಶಪಡಿಸಿಕೊಳ್ಳಲಾಗಿದೆ. ಸದ್ಯ ವಿಚಾರಣೆ ನಡೆಸಿರುವ ಪೊಲೀಸರಿಗೆ ಇವ್ರು ತಮ್ಮ ಖತರ್ನಾಕ್ ವಂಚನಾ ಜಾಲದ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಕಿಡ್ನ್ಯಾಪ್ ಮಾಡಿ ಹಣ ಸುಲಿಗೆ !
ಕಿಡ್ನ್ಯಾಪ್ ಮಾಡಿ ಹಣ ಸುಲಿಗೆ ಮಾಡೋದನ್ನೇ ಬ್ಯುಸಿನೆಸ್ ಮಾಡ್ಕೊಂಡಿದ್ದ ಆರೋಪಿಗಳು ಜಕ್ಕೂರಿನಲ್ಲಿ ಇಬ್ಬರನ್ನ ಅಪಹರಿಸಿದ್ದರು. ಓರ್ವ ಮಹಿಳೆ ಹಾಗೂ ಚಾಲಕನನ್ನ ಪ್ರಾಪರ್ಟಿ ತೋರಿಸ್ತೀನಿ ಅಂತ ಕಿಡ್ನ್ಯಾಪ್ ಮಾಡಿದ್ದರು. ಬಳಿಕ ಅವರಿಂದ 10 ಲಕ್ಷ ರೂಪಾಯಿ ಕಿತ್ತುಕೊಂಡು ಕಳಿಸಿದ್ದರು.
ಹೊಸಕೋಟೆ ಭಾಗದಲ್ಲೂ ಹಣ ಡಬಲ್ ಮಾಡೋದಾಗಿ ಕೈಚಳಕ ಪ್ರದರ್ಶಿಸಿದ್ದರು. ಅಲ್ಲದೇ ಪ್ರಾಪರ್ಟಿ ಮಾರಾಟ ಮಾಡುವುದಾಗಿ ಹೇಳಿ ಹಣ ಪಡೆದು ಎಸ್ಕೇಪ್ ಆಗುವುದು. ಒಂದು ಲಕ್ಷ ಅಸಲಿ ಹಣಕ್ಕೆ ಮೂರು ಲಕ್ಷ ನಕಲಿ ಹಣ ನೀಡುತ್ತಿದ್ದದ್ದು ಗೊತ್ತಾಗಿದೆ. ವಂಚನೆಗೂ ಮುನ್ನ ಮಿಕಗಳನ್ನು ತಮ್ಮ ಬಳಿಯ ನಕಲಿ ನೋಟಿನ ರಾಶಿಯ ವಿಡಿಯೋ ಅಸಲಿಯೆಂದು ತೋರಿಸಿ ವಂಚಿಸಿದ್ದು ಬಯಲಾಗಿದೆ.
ಬಂಧಿತ ನಾಲ್ವರ ಪೈಕಿ ನಟರಾಜ್ ಆಂಧ್ರದ ವೆಲ್ಲೂರು ಠಾಣೆಯ ರೌಡಿಶೀಟರ್. ಇನ್ನು ಬಂಧಿತ ನಾಲ್ವರಲ್ಲದೇ ಇನ್ನೂ ನಾಲ್ವರು ಆರೋಪಿಗಳಿದ್ದು ಅವರಿಗಾಗಿ ಪೊಲೀಸರು ತಲಾಶ್ ಮುಂದುವರೆಸಿದ್ದಾರೆ.
Discussion about this post