ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಜೇಶ್ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ವಿದ್ಯಾ ಸಾಗರ್ ಹೆಸರಿನಿಂದ ರಂಗಭೂಮಿಯಲ್ಲಿ ರಾಜೇಶ್ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ನಂತರ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಅಂಬರೀಶ್ ಜೊತೆ ನಟಿಸಿರುವ ಖ್ಯಾತಿ ರಾಜೇಶ್ಗೆ ಇತ್ತು. ನಾಯಕ ನಟರಾಗಿಯೂ ರಾಜೇಶ್ ಹೆಸರು ಮಾಡಿದ್ದರು. ಅವರ ಕಲಾ ಸೇವೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಸಿಕ್ಕಿತ್ತು. ಶ್ರೀನಿ ನಟನೆಯ ಓಲ್ಡ್ ಮಾಂಕ್ ಅವರ ಕಟ್ಟಕಡೆಯ ಸಿನಿಮಾ.
ಶಕ್ತಿ ನಾಟಕ ಮಂಡಳಿ ಕಟ್ಟಿದ್ದ ರಂಗಕರ್ಮಿ, ಸಿನಿಕರ್ಮಿ ರಾಜೇಶ್.. ನಿರುದ್ಯೋಗಿ ಬಾಳು, ಬಡವನ ಬಾಳು, ವಿಷಸರ್ಪ, ನಂದಾ ದೀಪ, ಕಿತ್ತೂರು ರಾಣಿ ಚೆನ್ನಮ್ಮ ನಾಟಕಗಳಲ್ಲಿ ಅಭಿನಯಿಸಿ ಖ್ಯಾತಿಗಳಿಸಿದ್ದರು. 60ರ ದಶಕದಲ್ಲಿ ‘ವೀರ ಸಂಕಲ್ಪ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿಕೊಟ್ಟರು, 1968ರ ‘ನಮ್ಮ ಊರು’ ಚಿತ್ರದಲ್ಲಿ ಮುನಿ ಚೌಡಪ್ಪ ಎಂದಿದ್ದ ಹೆಸರನ್ನ ರಾಜೇಶ್ ಅಂತ ಹೆಸರು ಬದಲಿಸಿಕೊಂಡಿದ್ದರು.
ಕಪ್ಪು ಬಿಳುಪು, ಎರಡು ಮುಖ, ಪುಣ್ಯ ಪುರುಷ, ದೇವರ ಗುಡಿ, ಕಾವೇರಿ, ಕ್ರಾಂತಿವೀರ ಸೇರಿದಂತೆ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಮಗಳು ನಿವೇದಿತಾರನ್ನ ನಟ ಅರ್ಜುನ್ ಸರ್ಜಾಗೆ ಕೊಟ್ಟು ಮದುವೆ ಮಾಡಿಸಿದ್ದರು. ರಥಸಪ್ತಮಿ ಚಿತ್ರದಲ್ಲಿ ಮಗಳು ನಿವೇದಿತಾ ನಟಿಸಿದ್ದಾರೆ. ಅಳಿಯ, ಮಗಳು, ಮೊಮ್ಮಗಳು ಸೇರಿದಂತೆ ಇಡೀ ಕುಟುಂಬ ಕಲಾಸೇವೆಯಲ್ಲಿದೆ.
Discussion about this post