ಭಾರತದ ಖ್ಯಾತ ಮಹಿಳಾ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ತಮ್ಮ ಅಸಂಖ್ಯಾತ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಅವರು 2022ರ ಅಂತ್ಯದಲ್ಲಿ ಟೆನ್ನಿಸ್ನಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ.
35ರ ಹರೆಯದ ಸಾನಿಯಾ ಮಿರ್ಜಾ ಭಾರತದ ಟೆನ್ನಿಸ್ ಸೂಪರ್ ಸ್ಟಾರ್ ಆಗಿದ್ದು, ವಿಶ್ವ ಟೆನ್ನಿಸ್ ಅಸೋಸಿಯೇಶನ್ನ ಸಿಂಗಲ್ಸ್ ವಿಭಾಗದಲ್ಲಿ ಅಗ್ರ 30ರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಷ್ಟೇ ಅಲ್ಲದೆ ಅವರು ಡಬಲ್ಸ್ ವಿಭಾಗದಲ್ಲಿ ಬರೋಬ್ಬರಿ 6 ಬಾರಿ ಗ್ರಾಂಡ್ಸ್ಲಾಮ್ ಕಿರೀಟವನ್ನು ಮುಡಿಗೇರಿಸಿಕೊಂಡು ದಾಖಲೆ ಬರೆದಿದ್ದಾರೆ.
ಈ ಕುರಿತು ಮಾತನಾಡಿದ ಸಾನಿಯಾ ಮಿರ್ಜಾ ‘ನಾನು ಟೆನ್ನಿಸ್ ಕಣದಿಂದ ಹಿಂದೆ ಸರಿಯುತ್ತಿರುವುದರ ಹಿಂದೆ ಸಾಕಷ್ಟು ಕಾರಣಗಳಿವೆ. ಆದರೆ ಅವು ಕಾರಣಗಳೆಂದು ನನಗೆ ಅನ್ನಿಸುವುದಿಲ್ಲ ಆದರೆ ನನ್ನ ವಿಶ್ರಾಂತಿಯಿಲ್ಲದ ಓಡಾಟದಿಂದ ಮಗುವನ್ನು ಕೂಡ ಸರಿಯಾಗಿ ನೋಡಿಕೊಳ್ಳಲಾಗುತ್ತಿಲ್ಲ. ಜೊತೆಗೆ ಮಂಡಿಯ ಸ್ನಾಯು ಸೆಳೆತವು ನನ್ನನ್ನು ಬಾಧಿಸಿದೆ ಹೀಗಾಗಿ ನನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳಲು ಈ ಸಂದರ್ಭ ಸೂಕ್ತವೆನಿಸಿದೆ’ ಎಂದು ಸಾನಿಯಾ ತಿಳಿಸಿದ್ದಾರೆ. ಇನ್ನು ಆಸ್ಟ್ರೇಲಿಯಾ ಓಪನ್ ಡಬಲ್ಸ್ ವಿಭಾಗದಲ್ಲಿ ಸೋಲಿನ ಬಳಿಕ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
Discussion about this post