ಹೋಟೆಲ್‍ಗಳಲ್ಲಿ ಗ್ರಾಹಕರಿಗೆ ಸೇವೆ ನೀಡುವ ‘ರೋಬೋ ಸುಂದರಿ’ ಸಾಂಸ್ಕೃತಿಕ ನಗರಿ ಮೈಸೂರಿಗೆ ಕಾಲಿಟ್ಟಿದ್ದಾಳೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಲು ನೂತನ ಪ್ರಯತ್ನಕ್ಕೆ ಕೈ ಹಾಕಿರುವ ಮೈಸೂರಿನ ಪ್ರತಿಷ್ಠಿತ ಸಿದ್ಧಾರ್ಥ ಹೋಟೆಲ್ ಮಾಲೀಕರು ರೋಬೋ ಚೆಲುವೆಯನ್ನ ತರಿಸಿದ್ದಾರೆ. ಈಗಾಗಲೇ ಹೋಟೆಲ್ನಲ್ಲಿ ಸೇವೆ ಸಲ್ಲಿಸ್ತಿರುವ ರೋಬೋ ಸುಂದರಿ ಗ್ರಾಹಕರಿಗೆ ಕೇಳಿದ ತಿಂಡಿ-ತಿನಿಸುಗಳನ್ನ ಫಟಾಫಟ್ ಅಂತಾ ತಂದು ಕೊಡುತ್ತಿದ್ದಾಳೆ.
ಈ ಬಗ್ಗೆ ನ್ಯೂಸ್1 ಜೊತೆ ಮಾತ್ನಾಡಿದ ಸಿದ್ದಾರ್ಥ ಗ್ರೂಪ್ಸ್ ಛೇರ್ಮನ್ ಪಿ.ವಿ.ಗಿರಿ, ಕೊರೊನಾ ವೇಳೆ ನಮ್ಮ ಹೋಟೆಲ್ನಲ್ಲಿ ಸರ್ವರ್ಗಳ ಕೊರತೆ ಇತ್ತು. ಇದ್ರಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಆಗುತ್ತಿರಲಿಲ್ಲ. ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಹೊಸ ಪ್ರಯತ್ನ ಮಾಡಿದ್ದೇವೆ. ನಮ್ಮ ಹೋಟೆಲ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಿದ್ದು, ಸದ್ಯ ದೆಹಲಿಯಿಂದ ಒಂದು ರೋಬೋವನ್ನು ತರಿಸಲಾಗಿದೆ. ಇನ್ನೂ ಆರು ರೋಬೋಗಳನ್ನು ಹೋಟೆಲ್ಗೆ ತರಿಸುತ್ತೇವೆ. ನಾವು ಮಾಡಿರುವ ಹೊಸ ಪ್ರಯತ್ನ ಜನರಿಗೂ ಇಷ್ಟವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ರು.
ಈ ರೋಬೋ ಸುಂದರಿ ಬಗ್ಗೆ ಮಾತ್ನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, 2.5 ಲಕ್ಷ ರೂ.ವಚ್ಚದಲ್ಲಿ ರೋಬೋ ಚೆಲುವೆ ಸಿದ್ಧವಾಗಿದೆ. ಮುಂದಿನ ದಿನದಲ್ಲಿ ಮತ್ತಷ್ಟು ರೋಬೋ ತರಿಸಲು ಚಿಂತನೆ ನಡೆಸಿದ್ದು, ಒಮ್ಮೆ ಚಾರ್ಜ್ ಮಾಡಿದರೆ 8 ಗಂಟೆ ಕೆಲಸ ನಿರ್ವಸುತ್ತೆ. ಕೊರೊನಾ ಟೈಂನಲ್ಲಿ ಹೋಟೆಲ್‍ಗಳಲ್ಲಿ ನೌಕರರ ಕೊರತೆ ಇತ್ತು. ಆ ಸಂದರ್ಭದಲ್ಲಿ ಹೋಟೆಲ್ ಗಳು ಸ್ಥಿತಿ ಆಯೋಮಯವಾಗಿತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ರೋಬೋ ಹೋಟೆಲ್ ಗೆ ಬರಲಿವೆ ಎಂದು ತಿಳಿಸಿದ್ರು.
Discussion about this post