ಎರಡನೇ ದಿನದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮಾಜಿ ಯುವ ವೇಗಿ ಚೇತನ್ ಸಕಾರಿಯ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. 50 ಲಕ್ಷ ಮೂಲ ಬೆಲೆಯ ಚೇತನ್ ಸಕಾರಿಯಗೆ ಕೊನೆಗೂ ಡೆಲ್ಲಿ ಕ್ಯಾಪಿಟಲ್ಸ್ 4 ಕೋಟಿ ನೀಡಿ ಖರೀದಿಸಿದೆ.
ಮೊದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೇತನ್ ಸಕಾರಿಯ ಬಿಡ್ ಮಾಡಿತ್ತು. 50 ಲಕ್ಷ ಇದ್ದ ಚೇತನ್ ಸಕಾರಿಯ ಬೆಲೆ ರಾಜಸ್ತಾನ ರಾಯಲ್ಸ್ ಎಂಟ್ರಿ ಬಳಿಕ 1 ಕೋಟಿಗೆ ಏರಿತು. ಆಗ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ಸ್ ನಡುವೆ ಚೇತನ್ ಸಕಾರಿಯಗಾಗಿ ಪೈಪೋಟಿ ನಡೆಯಿತು.
ಕೊನೆಗೂ 2 ಕೋಟಿಗೆ ಇನ್ನೇನು ರಾಜಸ್ಥಾನ ರಾಯಲ್ಸ್ಗೆ ಸೇಲ್ ಆಗಬೇಕು ಎನ್ನುವಷ್ಟರಲ್ಲಿ ಡೆಲ್ಲಿ 4 ಕೋಟಿಯವರೆಗೂ ಬಿಡ್ ಮಾಡಿದೆ. ಹೀಗಾಗಿ ಚೇತನ್ ಸಕಾರಿಯ 4 ಕೋಟಿಗೆ ದೆಹಲಿ ಪಾಲಾದರು.
Discussion about this post