ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15ರ ಮೆಗಾ ಹರಾಜು ಮುಕ್ತಾಯಗೊಂಡಿದ್ದು, ಈ ಬಾರಿ ಆರ್ಸಿಬಿ ತಂಡ ಒಟ್ಟು 19 ಆಟಗಾರರನ್ನು ಖರೀದಿಸಿದೆ.
ಈ ಮೂಲಕ 22 ಸದಸ್ಯರ ಬಳಗವನ್ನು ಕಟ್ಟಿದೆ. ಇದರಲ್ಲಿ ಉತ್ತರಾಖಂಡ್ನ ರಾಮನಗರದ ಅನುಜ್ ರಾವತ್ ಕೂಡ ಆರ್ಸಿಬಿ ಬಳಗಕ್ಕೆ ಸೇರಿಕೊಂಡಿದ್ದು, ಕನ್ನಡದಲ್ಲಿಯೇ ನಮಸ್ಕಾರ ಎಂದು ಟ್ವೀಟ್ ಮಾಡಿ ಅಭಿನಂದನೆ ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿರುವುದರ ಕುರಿತು ಮಾತನಾಡಿರುವ ಅನುಜ್, ತನ್ನ ಮೇಲೆ ನಂಬಿಕೆ ಇಟ್ಟು ಖರೀದಿ ಮಾಡಿದ ಆರ್ಸಿಬಿ ಫ್ರಾಂಚೈಸಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು ಅನುಜ್ ಬಗ್ಗೆ ಆರ್ಸಿಬಿ ಪೋಸ್ಟ್ ಮಾಡಿರುವ ವಿಡಿಯೋಗೆ ‘ನಮಸ್ಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂದು ಕನ್ನಡದಲ್ಲಿಯೇ ಬರೆದುಕೊಂಡಿದ್ದಾರೆ.
ನಮಸ್ಕಾರ @RCBTweets 🤗🙏 https://t.co/PLALvEqxwK
— Anuj Rawat (@AnujRawat_1755) February 13, 2022
Discussion about this post