ಕೆಜಿಎಫ್’ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ಡಾಲಿ ಧನಂಜಯ್ ಅಭಿನಯದ ‘ಬಡವ ರಾಸ್ಕಲ್’ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈಗಾಗಲೆ ಬಡವ ರಾಸ್ಕಲ್ ಸಿನಿಮಾ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಚಿತ್ರಪ್ರೇಮಿಗಳ ಕಡೆಯಿಂದ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇನ್ನು ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನಲ್ಲೆಯಲ್ಲಿ ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಮಾಡಿ ವಿವಿಧ ಊರಿನ ಅಭಿಮಾನಿಗಳನ್ನು ಭೇಟಿಯಾಗುತ್ತಿದ್ದಾರೆ.
ಇದೀಗ ನರಾಚಿ ಸೃಷ್ಟಿಕರ್ತ, ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಸೋಶಿಯಲ್ ಮೀಡಿಯಾ ಮೂಲಕ ‘ಬಡವ ರಾಸ್ಕಲ್’ ಚಿತ್ರತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ‘2021 ಖಂಡಿತವಾಗಿಯೂ ನಮ್ಮೆಲ್ಲರಿಗೂ ರೋಲರ್ ಕೋಸ್ಟರ್ ರೈಡ್ ಆಗಿತ್ತು. ನಮ್ಮದೇ ಆದ ಬಡವ ರಾಸ್ಕಲ್ ಸಿನಿಮಾದ ಸಕ್ಸಸ್ ಮೂಲಕ 2021 ಅಬ್ಬರದಿಂದ ಕೊನೆಗೊಂಡಿದೆ’ ಎಂದು ಬರೆದುಕೊಂಡು ಪ್ರಶಾಂತ್ ನೀಲ್ ‘ಬಡವ ರಾಸ್ಕಲ್’ ಚಿತ್ರತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
Thanks @prashanth_neel ❤️❤️❤️ https://t.co/JTGVlzz1z0
— Dhananjaya (@Dhananjayaka) January 3, 2022
Discussion about this post