ಟಾಲಿವುಡ್ ಸ್ಟಾರ್ ನಟ ಪ್ರಭಾಸ್, ಪುನೀತ್ ರಾಜ್ ಕುಮಾರ್ ಅಭಿನಯದ ‘ಜೇಮ್ಸ್’ ಚಿತ್ರದ ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಹೀರೋ ಆಗಿ ಅಭಿನಯಿಸಿರುವ ಕೊನೆಯ ಸಿನಿಮಾ ‘ಜೇಮ್ಸ್’ ಚಿತ್ರದ ಟೀಸರ್ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.
ಪರಭಾಷೆಗಳಲ್ಲೂ ಜೇಮ್ಸ್ ಹವಾ ಜೋರಾಗಿದ್ದು, ಟೀಸರ್ ರಿಲೀಸ್ ಆದ 24 ಗಂಟೆಗಳಲ್ಲಿ 1 ಕೋಟಿ ವೀಕ್ಷಣೆ ಪಡೆದಿದೆ. ಬೇರೆ ಚಿತ್ರರಂಗದ ನಾಯಕರೆಲ್ಲ ‘ಜೇಮ್ಸ್’ ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಪ್ರಭಾಸ್ ಅವರು ಕೂಡ ಜೇಮ್ಸ್ ಟೀಸರ್ ಕಂಡು ಫಿದಾ ಆಗಿದ್ದಾರೆ.
‘ಜೇಮ್ಸ್’ ಚಿತ್ರದ ಟೀಸರ್ ಅನ್ನು ಪ್ರಭಾಸ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಜೇಮ್ಸ್ ಸಿನಿಮಾ ಮಾಸ್ಟರ್ ಪೀಸ್ ಸಿನಿಮಾವಾಗುತ್ತೆ ಎಂಬುದನ್ನು ನಾನು ಖಾತ್ರಿ ಪಡಿಸುತ್ತೇನೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಇಷ್ಟಪಡುವ ಕೋಟ್ಯಂತರ ಜನರಿಗೆ ಈ ಸಿನಿಮಾ ವಿಶೇಷವಾಗಿರುತ್ತದೆ. ವಿ ಮಿಸ್ ಯೂ ಅಂತ ಪ್ರಭಾಸ್ ಬರೆದುಕೊಂಡಿದ್ದಾರೆ.
ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು , ಹಿಂದಿ ಹಾಗೂ ಮಲಯಾಳಂನಲ್ಲೂ ಜೇಮ್ಸ್ ಟೀಸರ್ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇಡೀ ಭಾರತೀಯ ಚಿತ್ರರಂಗವೇ ಜೇಮ್ಸ್ ಚಿತ್ರದ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಮುಂದಿನ ತಿಂಗಳು ಪುನೀತ್ ಹುಟ್ಟು ಹಬ್ಬದ ದಿನ ಅಂದ್ರೆ ಮಾರ್ಚ್ 17 ರಂದು ಐದು ಭಾಷೆಗಳಲ್ಲಿ ಜೇಮ್ಸ್ ಚಿತ್ರ ಬಿಡುಗಡೆಯಾಗುತ್ತಿದೆ.
Discussion about this post