ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ಆರ್ಭಟ ಜೋರಾಗುತ್ತಿದೆ. ಈ ಮಧ್ಯೆ ಒಮಿಕ್ರಾನ್ ಆರ್ಭಟಕ್ಕೆ ಕಡಿವಾಣ ಹಾಕಲು ಬಿಬಿಎಂಪಿ ಹೊಸ ಪ್ಲಾನ್ ಮಾಡಿದೆ. ಮುಂಬೈ ಮಾದರಿ ಅನುಸರಿಸಲು ಮುಂದಾದ ಬಿಬಿಎಂಪಿ, ಇನ್ನು ವ್ಯಾಕ್ಸಿನ್ ಪಡೆದುಕೊಳ್ಳದ ಜನರಿಗೆ ಶಾಕಿಂಗ್ ನ್ಯೂಸ್ ನೀಡಲಿದೆ.
ರೂಪಾಂತರಿ ವೈರಸ್ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪಾಲಿಕೆ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಮುಂಬೈ ಮಾದರಿಯಂತೆಯೇ ಬೆಂಗಳೂರಲ್ಲೂ ಈ ಕೆಳಗಿನ ರೂಲ್ಸ್ ಜಾರಿಗೆ ಮುಂದಾಗಿದೆ ಎನ್ನಲಾಗಿದೆ. ಈ ರೂಲ್ಸ್ ಜಾರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಬಿಬಿಎಂಪಿ ಮುಂದಾಗಿದೆಯಂತೆ.
Discussion about this post