ನವದೆಹಲಿ: ರೂಪಾಂತರಿ ತಳಿ ಒಮಿಕ್ರಾನ್ ನಿಧಾನವಾಗಿ ಇಡೀ ದೇಶವನ್ನ ಆಕ್ರಮಿಸಿಕೊಳ್ತಿದೆ. ನಿನ್ನೆ ಮೊನ್ನೆವರೆಗೂ ಬೆರಳೆಣಿಕೆಯಷ್ಟಿದ್ದ ಒಮಿಕ್ರಾನ್ ಕೇಸ್ಗಳು ಇದೀಗ ಸಾವಿರದ ಗಡಿ ದಾಟಿ ಮುನ್ನುಗ್ತಿದೆ. ಇತ್ತ ದೇಶಾದ್ಯಂತ ಒಮಿಕ್ರಾನ್ ಆತಂಕ ಹೆಚ್ಚಾಗುತ್ತಿದ್ದಂತೆ, 8 ರಾಜ್ಯಗಳಿಗೆ ಕೇಂದ್ರ ಸರ್ಕಾರ ಖಡಕ್ ಸೂಚನೆಗಳನ್ನ ರವಾನಿಸಿದೆ.
ದೇಶಾದ್ಯಂತ ರೂಪಾಂತರಿ ಒಮಿಕ್ರಾನ್ ಅಬ್ಬರ
ಒಂದು ಸಾವಿರ.. ದೇಶದಲ್ಲಿ ಹೊಸ ತಳಿ ಒಮಿಕ್ರಾನ್ ಒಂದು ಸಾವಿರದ ಗಡಿ ದಾಟಿದೆ.. ಪತ್ತೆಯಾದ ಕೆಲವೇ ಕೆಲವು ದಿನಗಳಲ್ಲಿ ಸಾವಿರದ ಗಡಿ ದಾಟಿ ಮುನ್ನುಗ್ತಿದೆ.. ದೆಹಲಿ.. ಮಹರಾಷ್ಟ್ರ.. ಗುಜರಾತ್ ಸೇರಿದಂತೆ ಹಲವಡೆ ರೂಪಾಂತರಿ ಕಾಡ್ಗಿಚ್ಚಿನಂತೆ ಹರಡುತ್ತಿದೆ..
ಒಟ್ಟು ಕೇಸ್ : 1270
ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 300ಕ್ಕೂ ಹೆಚ್ಚು ಒಮಿಕ್ರಾನ್ ಕೇಸ್ಗಳು ಪತ್ತೆಯಾಗಿವೆ. ರೂಪಾಂತರಿ ತಳಿಗೆ ದೇಶದಲ್ಲಿ ಎರಡನೆ ಬಲಿಯಾಗಿದ್ದು, ರಾಜಸ್ಥಾನದ 73 ವರ್ಷದ ವೃದ್ಧ ಒಮಿಕ್ರಾನ್ನಿಂದ ಜೀವ ಬಿಟ್ಟಿದ್ದಾರೆ. ಸದ್ಯ ದೇಶಾದ್ಯಂತ ಒಮಿಕ್ರಾನ್ ಸೋಂಕಿತರ ಸಂಖ್ಯೆ 1270ಕ್ಕೆ ಏರಿಕೆಯಾಗಿದೆ.
ಹೊಸ ತಳಿಯ ಅಬ್ಬರಕ್ಕೆ ರಾಷ್ಟ್ರ ರಾಜದಾನಿ ದೆಹಲಿ ಅಕ್ಷರಶಃ ನಲುಗಿದೆ. ಇತ್ತ ಮಹಾರಾಷ್ಟ್ರ ಕೂಡ ಒಮಿಕ್ರಾನ್ ಅಬ್ಬರಕ್ಕೆ ತತ್ತರಿಸಿದೆ. ಸದ್ಯ ಯಾವ್ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಒಮಿಕ್ರಾನ್ ಕೇಸ್ ಪತ್ತೆಯಾಗಿದೆ.
ಒಮಿಕ್ರಾನ್ ಮಿಂಚಿನ ವೇಗ..
- ಮಹಾರಾಷ್ಟ್ರ – 450
- ದೆಹಲಿ-320
- ಕೇರಳ-109
- ಗುಜರಾತ್-97
- ತೆಲಂಗಾಣ-62
- ಕರ್ನಾಟಕ-38
ದಿನದಿನಕ್ಕೂ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ತಿರುವ ಒಮಿಕ್ರಾನ್ ಸದ್ಯ ದೇಶಾದ್ಯಂತ ಆತಂಕ ಹುಟ್ಟು ಹಾಕಿದೆ. ಮುಂದಿನ ದಿನಗಳಲ್ಲಿ ಅಬ್ಬರಿಸುವ ಸಣ್ಣ ಮುನ್ಸೂಚನೆ ಕೊಟ್ಟಿದೆ. ಹೀಗೆ ಒಮಿಕ್ರಾನ್ ಆತಂಕ ಮನೆಮಾಡ್ತಿದ್ದಂತೆ ದೇಶದ ಕೆಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಖಡಕ್ ಸೂಚನೆಗಳನ್ನ ರವಾನಿಸಿದೆ.
8 ರಾಜ್ಯಗಳಿಗೆ ಎಚ್ಚರಿಕೆ
ದೇಶದ ಎಂಟು ರಾಜ್ಯಗಳಿಗೆ ಕೊರೊನಾ ನಿಯಂತ್ರಣಕ್ಕೆ ಮುಂದಾಗುವಂತೆ ಕೇಂದ್ರ ಸರ್ಕಾರ ಖಡಕ್ ಸೂಚನೆ ರವಾನಿಸಿದೆ. ದೆಹಲಿ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ್, ಕೇರಳ ಹಾಗೂ ತೆಲಂಗಾಣ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಎಚ್ಚರಿಸಿದೆ. ಸಾಧ್ಯವಾದಷ್ಟು ಕೊರೊನಾ ಟೆಸ್ಟಿಂಗ್ಗಳನ್ನ ಹೆಚ್ಚಿಸಿ, ಲಸಿಕೆ ವಿತರಣೆಯನ್ನ ಚುರುಕುಗೊಳಿಸೋಕೆ ತಿಳಿಸಿದೆ. ಅಲ್ಲದೆ ಆಸ್ಪತ್ರೆಗಳಲ್ಲಿ ಎಲ್ಲಾ ಸೌಲಭ್ಯಗಳನ್ನ ಹೆಚ್ಚಿಸಿ ಕೊರೊನಾ ಎದುರಿಸಲು ಸಿದ್ಧವಿರುವಂತೆ ಹೇಳಿದೆ.
ಸದ್ಯ ಹೊಸ ತಳಿ ಒಮಿಕ್ರಾನ್ ದೇಶಾದ್ಯಂತ ಆವರಿಸೋಕೆ ಶುರುಮಾಡಿದೆ.. ದಿನಕಳೆದಂತೆಲ್ಲಾ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಾ ಸಾಗ್ತಿದೆ. ಇದೇ ವೇಳೆ ಆರೋಗ್ಯ ತಜ್ಞರು ಹೊಸ ತಳಿ ಒಮಿಕ್ರಾನ್ ಹಳೆ ತಳಿ ಡೆಲ್ಟಾ ಜಾಗವನ್ನ ತುಂಬಲಿದೆ ಅಂತಾ ಊಹಿಸಿರೋದು ಮತ್ತಷ್ಟು ಆತಂಕವನ್ನ ಹುಟ್ಟು ಹಾಕಿದೆ.
Discussion about this post