ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಅವರು ತಮ್ಮ ತಂದೆ ಮೆಗಾ ಸ್ಟಾರ್ ಚಿರಂಜೀವಿ ತಮಗೆ ನಟನೆ ಮಾಡವುದನ್ನು ಹೇಳಿಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ. ಟಾಲಿವುಡ್ ನಿರ್ಮಾಪಕ ದಿಲ್ರಾಜು ಅವರ ಸೋದರಳಿಯ ಆಶಿಶ್ ರೆಡ್ಡಿ ಅಭಿನಯದ ಚೊಚ್ಚಲ ಸಿನಿಮಾ ‘ರೌಡಿ ಬಾಯ್ಸ್’ ಸಂಕ್ರಾಂತಿ ಹಬ್ಬದ ಪ್ರಯುಕ್ತ ಇಂದು ರಿಲೀಸ್ ಆಗ್ತಿದೆ.
ಈ ಸಂಬಂಧ ನಿನ್ನೆ ಹೈದರಾಬಾದ್ನಲ್ಲಿ ಕಾರ್ಯಕ್ರಮವ ಒಂದನ್ನ ಆಯೋಜನೆ ಮಾಡಲಾಗಿತ್ತು.
ನಟ ರಾಮ್ ಚರಣ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ರಾಮ್ ಚರಣ್ ಇಡೀ ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದರು. ಚಿತ್ರದ ನಟ ಆಶಿಶ್ ಅವರಿಗೆ ಕೇವಲ ನಟನೆಯತ್ತ ಗಮನ ಹರಿಸಿ ಶಿಸ್ತಿನಿಂದ ಇರಬೇಕು ಅಂತಾ ಸಲಹೆ ನೀಡಿದರು.
ನನ್ನ ತಂದೆ ನನಗೆ ನಟನೆ ಮಾಡುವುದು ಹೇಗೆ? ನೃತ್ಯ ಮಾಡುವುದು ಹೇಗೆ? ಎಂಬುದನ್ನು ಇದುವರೆಗೂ ಹೇಳಿಕೊಟ್ಟಿಲ್ಲ. ಬದಲಿಗೆ ಅವರು ನನಗೆ ಶಿಸ್ತಿನಿಂದ ಹೇಗಿರಬೇಕೆಂಬುದನ್ನು ಹೇಳಿ ಕೊಟ್ಟಿದ್ದಾರೆ. ನಮ್ಮ ಶಿಸ್ತು ಮತ್ತು ಕಠಿಣ ಪರಿಶ್ರಮವು ಯಶಸ್ಸಿನ ಮೈಲುಗಲ್ಲು ಸಾಧಿಸಲು ಸಾಧ್ಯ ಎಂದು ರಾಮ್ಚರಣ್ ಹೇಳಿದ್ದಾರೆ.
Discussion about this post