ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಿಲ್ಕ್ ಇಂಡಿಯಾ-2022 ಪರಿಶುದ್ಧ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. ಮೈಸೂರಿನ ಸದರನ್ ಸ್ಟಾರ್ ಹೋಟೆಲ್ ನಲ್ಲಿ ಹಸ್ತಶಿಲ್ಪ ವತಿಯಿಂದ ಆಯೋಜಿಸಿರುವ ಸಿಲ್ಕ್ ಇಂಡಿಯಾ ಮೇಳ ಇಂದಿನಿಂದ 9 ದಿನಗಳ ಕಾಲ ನಡೆಯಲಿದೆ.
ಮೊದಲ ದಿನವಾದ ಇಂದು ಸಿಲ್ಕ್ ಮೇಳಕ್ಕೆ ಮೈಸೂರು ಮೇಯರ್ ಸುನಂದಾ ಪಾಲನೇತ್ರ ಚಾಲನೆ ನೀಡಿದ್ರು. ಬಳಿಕ ಸಿಲ್ಕ್ ಮೇಳದಲ್ಲಿ ಭಾಗಿಯಾಗಿರುವ ಭಾರತದ ವಿವಿಧ ರಾಜ್ಯಗಳ ರೇಷ್ಮೆ ಸೀರೆ ನೇಕಾರರಿಗೆ ಮೇಯರ್ ಸುನಂದಾ ಪಾಲನೇತ್ರ ಶುಭ ಹಾರೈಸಿದ್ರು. ಇನ್ನು, ಸಿಲ್ಕ್ ಇಂಡಿಯಾ ಮೇಳದಲ್ಲಿ 45 ಕ್ಕೂ ಹೆಚ್ಚು ಮಳಿಗೆಗಳನ್ನ ತೆರೆಯಲಾಗಿದ್ದು, ದೇಶದ ವಿವಿಧ ಭಾಗದ ಉತ್ತಮ ಗುಣಮಟ್ಟದ ಸೀರೆಗಳನ್ನ ಮಾರಾಟ ಮಾಡಲಾಗುತ್ತೆ..
Discussion about this post