ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರನ್ನು ಮಹಾರಾಜರು ಬಿಟ್ಟರೇ ನಂತರ ಅಭಿವೃದ್ಧಿ ಮಾಡಿದ್ದು ನಾನೇ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರು ಅಕ್ಕಪಕ್ಕದ ಲೋಕಸಭಾ ಕ್ಷೇತ್ರಗಳಲ್ಲಿ ಎರಡೆರಡು ಬಾರಿಗೆ ಗೆದ್ದಿದ್ದು ನಾನು. ಆ ಮೂಲಕ ಮಹಾರಾಜರ ನಂತರ ಅತಿಹೆಚ್ಚು ಲೀಡ್‌ನಲ್ಲಿ ಗೆದ್ದಿದ್ದೇನೆ.
ಆದರೆ ಶಾಸಕ ಎಲ್.ನಾಗೇಂದ್ರ ತಾನೇ ಅಭಿವೃದ್ಧಿ ಹರಿಕಾರ ಅನ್ನುವ ಭ್ರಮೆಯಲ್ಲಿದ್ದಾರೆ. 300 ಕೋಟಿಯ ಕೆಲಸ ಮಾಡಿದ್ದೀನಿ ಅಂತಾ ಹೇಳ್ತಾರೆ. 300 ಅಲ್ಲ 30 ಕೋಟಿಯ ಅನುದಾನವನ್ನು ಅವರು ತಂದಿಲ್ಲ. ಮೈಸೂರು ಮಹರಾಜರನ್ನು ಬಿಟ್ಟರೆ ನಂತರ ನಾನೇ ಇಲ್ಲಿ ಅಭಿವೃದ್ಧಿ ಮಾಡಿದ್ದು ಎಂದು ಮೈಸೂರು ಶಾಸಕರ ಮೇಲೆ ಪ್ರತಾಪ್ ಸಿಂಹ ಹೇಳಿದ್ದಾರೆ.
ಪಾಸ್ ಪೊರ್ಟ್ ಸೇವಾ ಕೇಂದ್ರ ಮಾಡಿಸಿದ್ದು ನಾನು. ನೀವು ಗೋವಾಕ್ಕೆ ಹೋಗುವ ಫ್ಲೈಟ್ ತಂದಿದ್ದು ನಾನು. ಬೆಂಗಳೂರು-ಮೈಸೂರು ಹೆದ್ದಾರಿ ಮಾಡಿಸಿದ್ದು ನಾನು. ಕೆ.ಆರ್.ಕ್ಷೇತ್ರದ ಕಸದ ಸಮಸ್ಯೆ ನಿವಾರಿಸಿದ್ದು ನಾನು. ವಾಸ್ತವ ಹೀಗಿರುವಾಗ ಸುಮ್ನೆ ಜನರ ದಾರಿ ತಪ್ಪಿಸಬೇಡಿ, ಮಾತು ಬರುತ್ತೆ ಅಂತ ಏನೇನೋ ಹೇಳಬೇಡಿ ಅಂತಾ ಪ್ರತಾಪ್ ಸಿಂಹ್ ತಮ್ಮ ಸ್ವಪಕ್ಷೀಯ ಶಾಸಕನಿಗೆ ಟಾಂಗ್ ನೀಡಿದ್ದಾರೆ.
Discussion about this post