ನಟ ಹಾಗೂ ತಮಿಳುನಾಡಿನ ಮಕ್ಕಳ್ ನೀದಿ ಮೈಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಪಕ್ಷಕ್ಕೆ ಸಾರ್ವಜನಿಕರಿಂದ ಮತ್ತೊಮ್ಮೆ ದೇಣಿಗೆ ಕೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರೋ ಕಮಲ್ ಹಾಸನ್, ರಾಜಕೀಯ ಪಕ್ಷಕ್ಕೆ ಸಾರ್ವಜನಿಕರೇ ದೇಣಿಗೆ ನೀಡೋ ಮೂಲಕ ಭ್ರಷ್ಟಾಚಾರ ತೊಲಗಿಸಬಹುದು ಎಂದು ನಾನು ನಂಬುತ್ತೇನೆ. ಈ ನಿರ್ಧಾರದಿಂದ ಚಿತ್ರರಂಗ ಸೇರಿದಂತೆ ಅನೇಕರು ನನ್ನ ಆಡಿಕೊಂಡಿದ್ದರು. ಆದರೆ ನಾನು ನನ್ನ ಕೆಲಸವನ್ನು ನಂಬುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆಯೂ ಕೂಡ ಕಮಲ್ ಹಾಸನ್ ತಮ್ಮ ಪಕ್ಷಕ್ಕೆ ಸಾರ್ವಜನಿಕರು ದೇಣಿಗೆ ಸಲ್ಲಿಸಬಹುದು ಎಂದು ಹೇಳಿದ್ದರು. ಆಗ ಅದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು.
Discussion about this post