ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ನಿಗಮ ಮಂಡಳಿಗಳಿಗೆ ಮೇಜರ್ ಸರ್ಜರಿ ನಡೆಸಲಾಗಿದೆ. ಬಿ.ಎಸ್.ಯಡಿಯೂರಪ್ಪರ ಮೈಸೂರು ಭಾಗದ ಬೆಂಬಲಿಗರಾದ ನಂದೀಶ್ ಹಂಚೆ, ಎಲ್.ಆರ್.ಮಹದೇವಸ್ವಾಮಿ, ಅಪ್ಪಣ್ಣ, ಹೇಮಂತ್ ಕುಮಾರ್ ಗೌಡ ಹಾಗೂ ಫಣೀಶ್ಗೆ ಕೊಕ್ ನೀಡಲಾಗಿದೆ. ಸ್ಥಾನ ಉಳಿಸಿಕೊಳ್ಳುವಲ್ಲಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ ಯಶಸ್ವಿಯಾಗಿದ್ದು, ಇದೀಗ ಹೊಸ ಅಧ್ಯಕ್ಷರ ನೇಮಕಾತಿ ಹೆಚ್ಚಿನ ಕುತೂಹಲ ಕೆರಳಿಸಿದೆ. ಯಡಿಯೂರಪ್ಪ ಆಪ್ತ ವಲಯದಲ್ಲಿ ಹೆಚ್ಚಿನ ಆಕಾಂಕ್ಷಿಗಳು ಇದ್ದು, ಇನ್ನೆರಡು ದಿನಗಳಲ್ಲಿ ನಿಗಮ ಮಂಡಳಿಗಳ ಹೊಸ ಅಧ್ಯಕ್ಷರ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇನ್ನ BJP ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ಪಟ್ಟಿ ತಯಾರಿ ಆಗಲಿದ್ದು, ಮುಂದಿನ ಚುನಾವಣೆಗೆ ಪೂರಕವಾಗುವಂತೆ ಜಿಲ್ಲೆ, ಜಾತಿ, ವೈಯುಕ್ತಿಕ ವರ್ಚಸ್ಸು, ಹಿರಿತನದ ಆಧಾರದ ಮೇಲೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಹಂಚಿಕೆ ಮಾಡಲಾಗುವುದು.
Discussion about this post