L.R.ಶಿವರಾಮೇಗೌಡರ ಆಡಿಯೋ ಬಗ್ಗೆ CBI ತನಿಖೆ ಮಾಡಿಸಿದ್ರೆ ಸತ್ಯ ಹೊರಗೆ ಬರುತ್ತೆ ಎಂದು ಮಂಡ್ಯದಲ್ಲಿ ಶಾಸಕ ಸುರೇಶ್ ಗೌಡ ತಿಳಿಸಿದ್ರು. ಈ ಬಗ್ಗೆ ಮಾತ್ನಾಡಿದ ಅವರು, ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಎಲ್ಲಿ ಬೇಕಾದ್ರೂ ಪ್ರಮಾಣ ಮಾಡ್ತೇನೆ. LRS ಉಚ್ಚಾಟನೆ ಮಾಡಿರೋದು ನಮ್ಮ ಪಕ್ಷದ ಹೈಕಮಾಂಡ್. CBI ತನಿಖೆ ನಡೆದ್ರೆ ಈ ಆಡಿಯೋ ಯಾರಿಂದ ಬಂತು. ಆ ಮಹಿಳೆ ಮಾಡಿದ್ದಾರಾ, ಅವರ PA ಮಾಡಿದ್ರಾ, ಕಾಂಗ್ರೆಸ್ ಪಕ್ಷದವರು ಮಾಡಿದ್ದಾರಾ, ದಳದವರು ಮಾಡಿದ್ರಾ ಎಂಬುದು ಗೊತ್ತಾಗುತ್ತೆ. ಜಿ.ಮಾದೇಗೌಡ್ರು ಹೋರಾಟ ಮಾಡಿ ಮಂಡ್ಯ ಜಿಲ್ಲೆಗೆ ಕೊಡುಗೆ ನೀಡಿದ್ದಾರೆ. ಅವರು ನಮ್ಮ ಮುಂದೆ ಇಲ್ಲ, ಅವರ ಬಗ್ಗೆ ಚರ್ಚೆ ಮಾಡಿದ್ದು ಸರಿಯಲ್ಲ. ಎಲ್.ಆರ್.ಶಿವರಾಮೇಗೌಡ ಮಾಡಿರುವ ತಪ್ಪಿನಲ್ಲಿ ನನ್ನ ಕೈವಾಡ ಇಲ್ಲ ಎಂದು ಶಾಸಕ ಸುರೇಶ್ ಗೌಡ ತಿಳಿಸಿದ್ರು.
Discussion about this post