ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನೂತನ ವರ್ಷ 2022ಕ್ಕೆ ತಮ್ಮ ಆಲೋಚನೆಗಳನ್ನ ಬದಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಪರಮಾಣು ಪ್ರಯೋಗ, ಕ್ಷಿಪಣಿಗಳ ಪರೀಕ್ಷೆ ಮಾಡುತ್ತೀನಿ ಅನ್ನುವ ಮೂಲಕ ಅಮೆರಿಕಾಗೆ ಎಚ್ಚರಿಕೆ ನೀಡುತ್ತಿದ್ದ ಕಿಮ್ ಸದ್ಯ ದೇಶದ ಕಾರ್ಖಾನೆಗಳಲ್ಲಿ ಉತ್ಪಾದನೆ ಹೆಚ್ಚಿಸಿ ಜನರ ಜೀವನ ಸುಧಾರಿಸುವ ಬಗ್ಗೆ ಯೋಜನೆ ಹಾಕಿಕೊಂಡಿದ್ದಾರೆ ಅಂತ ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಕೊರಿಯಾ ವರ್ಕರ್ಸ್ ಪಾರ್ಟಿಯ 8ನೇ ಕೇಂದ್ರಿಯ ಸಮಿತಿ ಸಭೆಯಲ್ಲಿ ಭಾಗಿಯಾಗಿದ್ದ ಕಿಮ್, ಇನ್ನು ಮುಂದೆ ತಮ್ಮ ರಾಷ್ಟ್ರ ಪ್ರಮುಖವಾಗಿ ಅಭಿವೃದ್ಧಿಯತ್ತ ಹೆಚ್ಚಿನ ಗಮನಹರಿಸಿ ಜನರ ಜೀವನವನ್ನು ಸುಧಾರಿಸುವುದಾಗಿದೆ ಎಂದು ಹೇಳಿದ್ದಾರೆ.
ಈ ನಡುವೆ ದೇಹದ ತೂಕವನ್ನು 20 ಕೆಜಿಯಷ್ಟು ಇಳಿಕೆ ಮಾಡಿಕೊಂಡಿರುವ ಕಿಮ್ರ ಹೊಸ ಫೋಟೋ ಸಖತ್ ವೈರಲ್ ಆಗುತ್ತಿದ್ದು, ದೇಶಕ್ಕಾಗಿ ಕಿಮ್ ಕಡಿಮೆ ಊಟ ಮಾಡ್ತಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷದ ಜನವರಿ ಬಳಿಕ ಸಾರ್ವಜನಿಕವಾಗಿ ಕಿಮ್ ಕೆಲ ತಿಂಗಳುಗಳ ಕಾಲ ಕಾಣಿಸಿಕೊಂಡಿರಲಿಲ್ಲ. ಈ ವೇಳೆ ಅವರ ಆರೋಗ್ಯದ ಕುರಿತು ಹಲವು ಸುದ್ದಿಗಳು ವರದಿಯಾಗಿದ್ದವು. ಆದರೆ ಸದ್ಯ ಅವರು ತೂಕ ಇಳಿಸಿಕೊಂಡಿದ್ದು, ಅವರ ಆರೋಗ್ಯ ಉತ್ತಮವಾಗಿದೆ ಎಂಬ ಮಾಹಿತಿಯನ್ನು ಮಾಧ್ಯಮಗಳು ವರದಿ ಮಾಡಿದೆ.
Discussion about this post