ಬಳ್ಳಾರಿ: ನಿನ್ನೆಯ ದಿನ ತಮ್ಮ 55ನೇ ಹುಟ್ಟುಹಬ್ಬವನ್ನು ಕುಟುಂಬದವರು, ಅಭಿಮಾನಿಗಳು ಹಾಗೂ ಸ್ನೇಹಿತರೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡ ಮಾಜಿ ಸಚಿವ ಜನಾರ್ದನ ರೆಡ್ಡಿ, ಬೆಂಬಲಿಗರಿಗೆ ಹೊಸ ಸುಳಿವು ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜಕೀಯದಲ್ಲಿ ಮತ್ತೆ ಸಕ್ರೀಯರಾಗುವ ಸುಳಿವನ್ನ ನೀಡಿದ್ದಾರೆ.
ಬಿಜೆಪಿ ಮೇಲೆ ಬಳ್ಳಾರಿಯ ಋಣ ಇದೆ. ಬಿಜೆಪಿಗೆ ಬಳ್ಳಾರಿಯ ಋಣ ತೀರಿಸಿಕೊಳ್ಳುವ ಅವಶ್ಯಕತೆ ಇದೆ. ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಿಜೆಪಿ ಸರ್ಕಾರ ಬರಲಿಕ್ಕೆ ನಮ್ಮ ಬಳ್ಳಾರಿ ಕಾರಣ ಎಂದಿದ್ದಾರೆ.
ರಾಜಕೀಯ ಕುತಂತ್ರದಿಂದ ನನ್ನನ್ನು ಬಳ್ಳಾರಿಯಿಂದ ದೂರ ಇಟ್ಟಿದ್ರು. ಈಗ ದೇವರ ಆಶೀರ್ವಾದದಿಂದ ಮತ್ತೆ ಬಂದಿದ್ದೇನೆ. ದೇವರು ನನಗೆ 110 ವರ್ಷ ಆಯಸ್ಸು ಕೊಟ್ಟು, ಬಳ್ಳಾರಿಯಲ್ಲಿ ಇನ್ನೂ ಹತ್ತು ವರ್ಷ ಕೊಡಲಿದ್ದಾನೆ ಎಂದಿದ್ದಾರೆ. ಹತ್ತು ವರ್ಷಗಳಲ್ಲಿ ಆಗದ ಕೆಲಸಗಳನ್ನ ಒಂದೇ ವರ್ಷದಲ್ಲಿ ಮಾಡುವ ಉತ್ಸಾಹ ಬರಲಿದೆ ಎಂದರು.
ತಮ್ಮ ಕನಸಿನ ಕೆಲಸಗಳು ಅರ್ಧಂಬರ್ಧ ಆಗಿವೆ. ಇನ್ನೂ ಒಂದುವರೆ ವರ್ಷದಲ್ಲಿ ಬಿಜೆಪಿ ಸರ್ಕಾರದ ಅವಧಿಯ ಸಂದರ್ಭದಲ್ಲಿ ಆ ಕೆಲಸಗಳನ್ನು ಪೂರ್ಣಗೊಳಿಸುವುದಾಗಿಯೂ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಬೆಂಗಳೂರಿನ ನಂತರ ಬಳ್ಳಾರಿಯನ್ನೇ ನಮ್ಮ ರಾಜ್ಯದ ಮಹಾನಗರವನ್ನಾಗಿ ಮಾಡುವಂತೆ ಆಗ್ರಹಿಸಿದರು.
Discussion about this post