ತುಮಕೂರು: ನೀವು ಅಂಬರೀಷ್ ಮತ್ತು ವಿಷ್ಣುವರ್ಧನ್ ಅಭಿನಯದ ದಿಗ್ಗಜರು ಸಿನಿಮಾ ನೋಡಿದ್ದೀರಲ್ಲಾ.. ಅಲ್ಲಾ ಬೆಳ್‌ಬೆಳಗ್ಗೆ ಈ ಸಿನಿಮಾ ಕತೆ ಯಾಕೆ ಅಂದ್ರಾ..? ಈ ಸ್ಟೋರಿ ಓದಿ..
ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ರಾಮನ ಪಾಳ್ಯದ ಕೆಂಪೇಗೌಡ ಅವರು, ಐದಾರ್ ಜನ ಫ್ರೆಂಡ್ಸು ಮೊನ್ನೆ ಶುಕ್ರವಾರ ಸಂಜೆ 6ಗಂಟೆಗೆ ತುಮಕೂರು ನಗರದ ಗುಬ್ಬಿ ಗೇಟ್ ಬಳಿ ಇರೋ ಮಹೀಂದ್ರಾ ಶೋರೂಂಗೆ ಹೋಗಿದ್ರು.
ಆ ಟೈಮಲ್ಲಿ ಇವ್ರ ಭಾಷೆ, ವೇಷ-ಭೂಷಣ ನೋಡಿ 10 ರೂಪಾಯಿಗೆ ಯೋಗ್ಯತೆ ಇಲ್ಲ ನಿಮ್ಗೆ ಕಾರ್ ತಗೊಳ್ಳೋಕೆ ಬರ್ತೀರಾ ಅಂತ ಶೋರೂಮ್ ಸಿಬ್ಬಂದಿ ಅವಮಾನ ಮಾಡ್ಬಿಟ್ರಂತೆ.
ಈ ಟೈಮಲ್ಲಿ ಅರ್ಧ ಗಂಟೇಲಿ ದುಡ್ಡು ತರ್ತೀನಿ ಕಾರ್ ಕೊಡ್ತೀಯಾ ಅಂತ ಕೇಳಿದ್ದಾರೆ ಕೆಂಪೇಗೌಡ. ಮೊದ್ಲು ತಗೊಂಡ್ ಬನ್ನಿ ಹೋಗ್ರೀ ಅಂದಿದ್ದಾರೆ ಶೋರೂಂ ಸಿಬ್ಬಂದಿ. ಜಸ್ಟ್ ಅರ್ಧ ಗಂಟೆ, 10 ಲಕ್ಷದೊಂದಿಗೆ ಶೋರೂಂನಲ್ಲಿ ಕೆಂಪೇಗೌಡ ಌಂಡ್ ಟೀಮ್ ಪ್ರತ್ಯಕ್ಷ. ಆ ನಂತ್ರ ಆಗಿದ್ದೇ ಈ ಸೀನು. ಅರ್ಧ ಗಂಟೆಲಿ 10 ಲಕ್ಷದೊಂದಿಗೆ ಬಂದ ಕೆಂಪೇಗೌಡ ಮತ್ತಾತನ ಸ್ನೇಹಿತ್ರು ಶೋರೂಂ ಸಿಬ್ಬಂದಿಗೆ ಅಕ್ಷರಶಃ ಬೆವರಿಳಿಸಿಬಿಟ್ಟಿದ್ದಾರೆ.
ಹಣ ಹೊಂದಿಸ್ಕೊಂಡ್ ಬಂದ್ಮೇಲೆ ಕಾರ್ ಕೊಟ್ರಾ ಅಂದ್ರೆ ಖಂಡಿತಾ.. ಇಲ್ಲ.. ಮುಂದಿನ ಎರಡ್ಮೂರು ದಿನದಲ್ಲಿ ಕಾರ್ ಕೊಡ್ತೀವಿ ಅಂದಿದ್ದಾರೆ. ರಾತ್ರಿ 10.30ರವರೆಗೂ ಚರ್ಚೆ ನಡೆಯುತ್ತೆ. ಕೊನೆಗೆ ಗಲಾಟೆ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆ ಮೆಟ್ಟಿಲೇರುತ್ತೆ. ನಂತ್ರ ಅವಮಾನಿಸಿದ ಸಿಬ್ಬಂದಿಯಿಂದ ಗ್ರಾಹಕನಿಗೆ ತಪ್ಪಾಯಿತು ಎಂದು ಮುಚ್ಚಳಿಕೆ ಬರೆಸೋ ಮೂಲಕ ಪ್ರಕರಣ ಅಂತ್ಯ ಕಂಡಿದೆ.
ಒಟ್ಟಾರೆ ಕಾರು ಕೊಳ್ಳೋಕೆ ಬಂದ ಗ್ರಾಹಕನಿಗೆ ಆತನ ಬಟ್ಟೆಬರೆ ನೋಡಿ ಅವಮಾನಿಸಿದ್ದು ನಿಜಕ್ಕೂ ನಾಚಿಕೆಗೇಡು. ಆದ್ರೂ ಶೋರೂ ಸಿಬ್ಬಂದಿಗೆ ಅರ್ಧ ಗಂಟೆಯಲ್ಲಿ ಹಣ ಹೊಂದಿಸೋ ಮೂಲಕ ಸಿನಿಮೀಯ ಸ್ಟೈಲಲ್ಲಿ ಗ್ರಾಹಕ ಕೂಡ ಪಾಠ ಕಲಿಸಿದ್ದಾನೆ ಬಿಡಿ.
ವಿಶೇಷ ಬರಹ: ಮಧು ಇಂಗಳದಾಳ್, ನ್ಯೂಸ್ ಫಸ್ಟ್, ತುಮಕೂರು
Discussion about this post