ಭಾರತ – ವೆಸ್ಟ್ಇಂಡೀಸ್ ನಡುವಿನ 3ನೇ ಏಕದಿನ ಕದನಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಆರಂಭಿಕ ಎರಡೂ ಪಂದ್ಯಗಳಲ್ಲಿ ಕ್ಲಿನಿಕಲ್ ಪರ್ಫಾಮೆನ್ಸ್ ನೀಡಿ ಗೆದ್ದಿರುವ ಟೀಮ್ ಇಂಡಿಯಾ ಇದೀಗ ಕ್ಲೀನ್ ಸ್ವೀಪ್ ಮಾಡಲು ಸಜ್ಜಾಗಿದೆ. ಈ ಮೂಲಕ ಸೌತ್ ಆಫ್ರಿಕಾ ಪ್ರವಾಸದ ಕಹಿ ನೆನಪನ್ನ ಓವರ್ಕಮ್ ಮಾಡೋ ಲೆಕ್ಕಾಚಾರದಲ್ಲಿದೆ. ಅತ್ತ ವೆಸ್ಟ್ ಇಂಡೀಸ್ ತಂಡ ಸಮಾಧಾನಕರ ಗೆಲುವಿನ ನಿರೀಕ್ಷೆಯಲ್ಲಿದೆ.
ಟೀಮ್ ಇಂಡಿಯಾದಲ್ಲಿ ಬದಲಾವಣೆ ಖಚಿತ..!
ಕೊನೆಯ ಏಕದನ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಬದಲಾವಣೆ ಖಚಿತವಾಗಿದೆ. ಈಗಾಗಲೇ ರೋಹಿತ್ ಶರ್ಮಾ, ಕೋವಿಡ್ನಿಂದ ಚೇತರಿಸಿಕೊಂಡಿರುವ ಶಿಖರ್ ಧವನ್ ಕಮ್ಬ್ಯಾಕ್ ಅನ್ನ ಕನ್ಫರ್ಮ್ ಮಾಡಿದ್ದಾರೆ. ಜೊತೆಗೆ ಶ್ರೇಯಸ್ ಅಯ್ಯರ್ಗೂ ಪ್ಲೇಯಿಂಗ್ ಇಲೆವೆನ್ ಸ್ಥಾನ ಸಿಗೋ ಸಾಧ್ಯತೆಯಿದೆ. ಆದ್ರೆ, ಈ ಇಬ್ಬರು ಕಮ್ಬ್ಯಾಕ್ ಮಾಡಿದ್ರೆ, ಯಾರಿಗೆ ಕೊಕ್ ನೀಡಲಾಗುತ್ತೆ ಅನ್ನೋದು ಕುತೂಹಲ ಮೂಡಿಸಿದೆ.
ಯುವ ಆಟಗಾರರಿಗೂ ಸಿಗುತ್ತಾ ಅವಕಾಶ.?
ಈಗಾಗಲೇ ಟೀಮ್ ಇಂಡಿಯಾ ಸರಣಿ ಜಯಿಸಿರೋದ್ರಿಂದ ಕೊನೆಯ ಪಂದ್ಯದಲ್ಲಿ ಪ್ರಯೋಗಕ್ಕೆ ಮುಂದಾಗೂ ಸಾಧ್ಯತೆಯಿದೆ. ತಂಡದಲ್ಲಿ ಕೆಲವರಿಗೆ ವಿಶ್ರಾಂತಿ ನೀಡಿ ಬೆಂಚ್ ಸ್ಟ್ರೆಂಥ್ ಅನ್ನ ಪರೀಕ್ಷೆಗೆ ಒಡ್ಡೋ ಯೋಜನೆ ತಂಡದಲ್ಲಿದೆ. ಅದರಲ್ಲೂ ಮುಖ್ಯವಾಗಿ ರವಿ ಬಿಷ್ನೋಯಿ, ಕುಲ್ದೀಪ್ ಯಾದವ್ಗೆ ಅವಕಾಶ ನೀಡುವ ಸಾಧ್ಯತೆಯಿದೆ. ಇನ್ನು ವೇಗಿಗಳ ವಿಭಾಗದಲ್ಲೂ ಸರ್ಜರಿ ಮಾಡಿ ಆವೇಶ್ ಖಾನ್ಗೆ ಚಾನ್ಸ್ ನೀಡಿದ್ರೂ ಅಚ್ಚರಿಯಿಲ್ಲ.
ಆಟಗಾರರ ತಲೆಯಲ್ಲಿ ಐಪಿಎಲ್ ಆಕ್ಷನ್ ಲೆಕ್ಕಾಚಾರ.!
ಇನ್ನೊಂದು ದಿನ ಕಳೆದ್ರೆ ಐಪಿಎಲ್ ಮೆಗಾ ಆಕ್ಷನ್ ನಡೆಯಲಿದೆ. ಐಪಿಎಲ್ ಫ್ರಾಂಚೈಸಿಗಳ ಕಣ್ಣು ಎಲ್ಲಾ ಆಟಗಾರರ ಮೇಲೆ ಇರೋದ್ರಲ್ಲಿ ಅನುಮಾನವೇ ಇಲ್ಲ. ಇನ್ನು ಆಟಗಾರರ ತಲೆಯಲ್ಲಿಯೋ ಇದೇ ವಿಚಾರವಿದೆ. ಹೀಗಾಗಿ ನರೇಂದ್ರ ಮೋದಿ ಅಂಗಳದಲ್ಲಿ ಸಖತ್ ಪರ್ಫಾಮ್ ಮಾಡಿ ಬೆಂಗಳೂರಿನಲ್ಲಿರೋ ಫ್ರಾಂಚೈಸಿಗಳನ್ನ ಇಂಪ್ರೆಸ್ ಮಾಡೋ ಪ್ರಯತ್ನಗಳಿಗೂ ಇಂದಿನ ಪಂದ್ಯ ಸಾಕ್ಷಿಯಾಗಲಿದೆ.
ಈಗಾಗಲೇ ಸರಣಿ ಕೈ ಚೆಲ್ಲಿರುವ ವಿಂಡೀಸ್ ತಂಡದಲ್ಲಿ ಕೊನೆಯ ಪಂದ್ಯವನ್ನಾದ್ರೂ ಗೆಲ್ಲೋ ಲೆಕ್ಕಾಚಾರವಿದೆ. ಅದರ ಜೊತೆಗೆ ಕೆರಬಿಯನ್ ಕಲಿಗಳ ಮನದಲ್ಲೂ ಐಪಿಎಲ್ ಆಕ್ಷನ್ ಇದ್ದೇ ಇದೆ. ಹೀಗಾಗಿ ಇಂದಿನ ಪಂದ್ಯ ಟಫ್ ಫೈಟ್ಗೆ ಸಾಕ್ಷಿಯಾದ್ರೂ ಅಚ್ಚರಿಯಿಲ್ಲ.
Discussion about this post