ಸತತ ಸೋಲುಗಳಿಂದ ಕಂಗೆಟ್ಟಿದ್ದ ನಟ ಯಂಗ್ ಡೈನಾಮಿಕ್ ಹೀರೋ ಪ್ರಜ್ವಲ್ ದೇವರಾಜ್ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡಿದ್ದು ಜೆಂಟಲ್ಮ್ಯಾನ್ ಸಿನಿಮಾ ಮೂಲಕ. 2022 ರಲ್ಲಿ ಪ್ರಜ್ವಲ್ ದೇವರಾಜ್ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
2021 ರ ಕೊನೆಯ ತಿಂಗಳಲ್ಲಿ ರಿಲೀಸ್ ಆದ ಅರ್ಜುನ್ ಗೌಡ ಸಿನಿಮಾದ ಮೂಲಕ, ಈ ವರ್ಷದ ಸಾಕಷ್ಟು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಖಾದರ್ ಕುಮಾರ್ ಅವರ ವೀರಂ ಮತ್ತು ಎಚ್.ಎಸ್ ಲೋಹಿತ್ ಅವರ ಮಾಫಿಯಾ ಸಿನಿಮಾದಲ್ಲಿ ಸದ್ಯ ಪ್ರಜ್ವಲ್ ಬ್ಯುಸಿಯಾಗಿದ್ದಾರೆ. ಇದಾದ ನಂತರ ತಮ್ಮ ಸ್ನೇಹಿತ ಪನ್ನಾಗಾಭರಣ ಜೊತೆಯಲ್ಲಿ 2 ಸಿನಿಮಾ ಮಾಡಲು ತಯಾರಾಗಿದ್ದಾರೆ ಪ್ರಜ್ವಲ್.
ಅಂದುಕೊಂಡತೆ ಆಗಿದ್ದರೆ ಎರಡು ಸಿನಿಮಾಗಳು 2021 ರಲ್ಲಿಯೇ ಬಿಡುಗಡೆ ಆಗಬೇಕಿತ್ತು. ಆದರೆ ಕೋವಿಡ್ ಇದ್ದ ಕಾರಣ ಸಿನಿಮಾಗಳು ತಡವಾಗಿದೆ.
ಈ ನಡುವೆ ರಾಮ್ ನಾರಾಯಣ್ ನಿರ್ದೇಶಿಸಿ ಪ್ರಜ್ವಲ್ ದೇವರಾಜ್ ನಟಿಸಿರುವ ‘ಅಬ್ಬರ’ ಸಿನಿಮಾ ರಿಲೀಸ್ ಗಾಗಿ ಕಾಯುತ್ತಿದೆ. ಇದಾದ ನಂತರ ಜಕ್ಕ ಹರಿಪ್ರಸಾದ್ ನಿರ್ದೇಶನದ ಮತ್ತೊಂದು ಥ್ರಿಲ್ಲರ್ ಸಿನಿಮಾಗೂ ಪ್ರಜ್ವಲ್ ಸಹಿ ಮಾಡಿದ್ದಾರೆ.ಎಲ್ಲಾ ಅಂದುಕೊಂಡಂತೆ ಆದರೆ ಈ ವರ್ಷ ಪ್ರಜ್ವಲ್ ದೇವರಾಜ್ ಅಭಿನಯದ -6 ಸಿನಿಮಾಗಳು ರಿಲೀಸ್ ಆಗಲಿವೆ.
Discussion about this post