ಹರಾಜಿಗೆ ಫ್ರಾಂಚೈಸಿಗಳ ಸಿದ್ಧತೆ ಹೇಗಿದೆ? ಯಾವ ಫ್ರಾಂಚೈಸಿ ಬಳಿ ಎಷ್ಟು ಹಣಯಿದೆ? ಎಷ್ಟು ಸ್ಲಾಟ್ ಫಿಲ್ ಆಗಬೇಕು? ಅದರಲ್ಲಿ ಓವರ್ಸೀಸ್ ಸ್ಲಾಟ್ ಎಷ್ಟು? ಹೀಗೆ ಹಲವು ಪ್ರಶ್ನೆಗಳು ಮೆಗಾ ಹರಾಜಿಗೂ ಮುನ್ನ ಎಲ್ಲರನ್ನೂ ಕಾಡ್ತಿವೆ. ಈ ಎಲ್ಲಾ ಉತ್ತರ ನೀಡೋ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಓದಿ.
ಇಂಡಿಯನ್ ಪ್ರೀಮಿಯರ್ ಲೀಗ್ನ ಮೆಗಾ ಹರಾಜಿಗೆ ಕೌಂಟ್ಡೌನ್ ಆರಂಭವಾಗಿದೆ. ಕೆಲವೇ ಗಂಟೆಗಳಲ್ಲಿ ಆಕ್ಷನ್ ಆರಂಭವಾಗಲಿದ್ದು, ಯಾವ ಆಟಗಾರರ ಯಾವ ತಂಡ ಪಾಲಾಗ್ತಾನೆ ಅನ್ನೋದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಈಗಾಗಲೇ ಟಾರ್ಗೆಟ್ ಮಾಡಿರುವ ಆಟಗಾರರ ಖರೀದಿಗೆ ಫ್ರಾಂಚೈಸಿಗಳು ಪ್ಲಾನ್ ರೂಪಿಸಿದ್ದು, ಲಾಭ-ನಷ್ಟದ ಲೆಕ್ಕಾಚಾರ ನಡೆಸ್ತಿದ್ದಾರೆ.
10 ಫ್ರಾಂಚೈಸಿ, 343.7 ಕೋಟಿ, 590 ಪ್ಲೇಯರ್ಸ್..!
ಐಪಿಎಲ್ ಹರಾಜಿನ ಸಿಂಪಲ್ ಮ್ಯಾಥಮಿಟಿಕ್ಸ್ ಅಂದ್ರೆ ಇಷ್ಟೇ. ಒಟ್ಟು 590 ಆಟಗಾರರು ಕಣದಲ್ಲಿದ್ದು, 10 ಫ್ರಾಂಚೈಸಿಗಳು ಇವರ ಖರೀದಿಗೆ ಪೈಪೋಟಿ ನಡೆಸಲಿವೆ. ಆದ್ರೆ, ಈ 590 ಆಟಗಾರರಲ್ಲಿ ಗರಿಷ್ಠ 217 ಆಟಗಾರರು ಮಾತ್ರ ಸೇಲ್ ಆಗಲಿದ್ದಾರೆ.
ಐಪಿಎಲ್ ಹರಾಜಿನ ಲೆಕ್ಕಾಚಾರ
ಮೆಗಾ ಆಕ್ಷನ್ಗೂ ಮುನ್ನವೇ ಇದ್ದ ರಿಟೈನ್ ಅವಕಾಶದಲ್ಲಿ ಒಟ್ಟು 33 ಆಟಗಾರರನ್ನ ಫ್ರಾಂಚೈಸಿಗಳು ರಿಟೈನ್ ಮಾಡಿಕೊಂಡಿವೆ. ಒಟ್ಟು ಇದ್ದ 900 ಕೋಟಿ ಬಜೆಟ್ನಲ್ಲಿ ಈಗಾಗಲೇ 343.7 ಕೋಟಿ ಖರ್ಚಾಗಿದೆ. ಇದೀಗ 10 ಫ್ರಾಂಚೈಸಿಗಳ ಬಳಿ 556.3 ಕೋಟಿ ಉಳಿದಿದ್ದು, ಖಾಲಿ ಇರುವ 217 ಸ್ಲಾಟ್ಗಳ ಪೈಕಿ, 517 ಆಟಗಾರರು ಹರಾಜಿನ ಕಣದಲ್ಲಿದ್ದಾರೆ.
ಇಂದು ಮತ್ತು ನಾಳೆ ನಡೆಯೋ ಹರಾಜಿನ ಕೇಂದ್ರ ಬಿಂದು ಫ್ರಾಂಚೈಸಿಗಳ ಪರ್ಸ್ ಸೈಜ್. ಕಳೆದ ಆವೃತ್ತಿಗಳಲ್ಲಿ 80 ಕೋಟಿಯಿದ್ದ ಪರ್ಸ್ ಸೈಜ್ ಅನ್ನ ಈ ಬಾರಿ ಬಿಸಿಸಿಐ 90 ಕೋಟಿಗೆ ಹೆಚ್ಚಿಸಿದೆ. ಅದರಲ್ಲೇ ರಿಟೈನ್ ಮಾಡಿಕೊಳ್ಳಲೂ ಹಣವನ್ನ ಬಳಕೆ ಮಾಡಿಕೊಳ್ಳಲಾಗಿದೆ. ಈಗ ಉಳಿದಿರೋ ಹಣದಲ್ಲೇ ಎಲ್ಲಾ ಖರೀದಿ ಲೆಕ್ಕಾಚಾರ ನಡೆಯಲಿದೆ.
ಫ್ರಾಂಚೈಸಿಗಳ ಬಳಿ ಉಳಿದಿರೋ ಹಣ ಎಷ್ಟು..?
ಪಂಜಾಬ್-72 ಕೋಟಿ
ಹೈದ್ರಾಬಾದ್-68 ಕೋಟಿ
ರಾಜಸ್ಥಾನ-62 ಕೋಟಿ
ಲಕ್ನೋ-59 ಕೋಟಿ
ಬೆಂಗಳೂರು-57 ಕೋಟಿ
ಗುಜರಾತ್-52 ಕೋಟಿ
ಸಿಎಸ್ಕೆ-48 ಕೋಟಿ
ಕೆಕೆಆರ್-48 ಕೋಟಿ
ಮುಂಬೈ-48 ಕೋಟಿ
ಡೆಲ್ಲಿ-47.5 ಕೋಟಿ
ಪಂಜಾಬ್ ಕಿಂಗ್ಸ್ ಪಡೆಯಲ್ಲಿ 23 ಸ್ಲಾಟ್ಗಳು ಖಾಲಿ ಉಳಿದಿದ್ರೆ, ಹೈದ್ರಾಬಾದ್, ರಾಜಸ್ಥಾನ, ಲಕ್ನೋ, ಆರ್ಸಿಬಿ ಹಾಗೂ ಗುಜರಾತ್ ತಂಡಗಳಲ್ಲಿ ತಲಾ 22 ಸ್ಲಾಟ್ಗಳಿವೆ. ಇನ್ನು ಚೆನ್ನೈ, ಕೊಲ್ಕತ್ತಾ, ಮುಂಬೈ ಹಾಗೂ ಡೆಲ್ಲಿ ಫ್ರಾಂಚೈಸಿಗಳಲ್ಲಿ ತಲಾ 21 ಸ್ಲಾಟ್ಗಳು ಖಾಲಿ ಉಳಿದಿವೆ. ವಿದೇಶಿ ಸ್ಲಾಟ್ಗಳ ಲೆಕ್ಕಾಚಾರದಲ್ಲಿ ಪಂಜಾಬ್ ಕಿಂಗ್ಸ್ 8, ಕೊಲ್ಕತ್ತಾ ನೈಟ್ ರೈಡರ್ಸ್ ಬಳಿ 6 ಸ್ಲಾಟ್ಗಳು ಉಳಿದಿವೆ. ಇನ್ನಿಳಿದ ತಂಡಗಳಲ್ಲಿ 7 ವಿದೇಶಿ ಸ್ಥಾನಗಳು ಬಾಕಿ ಉಳಿದಿವೆ.
ಒಟ್ಟಿನಲ್ಲಿ ಪರ್ಸ್ನಲ್ಲಿರೋ ಬಾಕಿ ಬ್ಯಾಲೆನ್ಸ್, ಹರಾಜಿನಲ್ಲಿರೋ ಆಟಗಾರರು, ತಂಡದಲ್ಲಿ ಉಳಿದಿರೋ ಸ್ಲಾಟ್ಗಳು.. ಈ ಎಲ್ಲವನ್ನ ಗಮನದಲ್ಲಿರಿಸಿಯೇ ಫ್ರಾಂಚೈಸಿಗಳ ಸಖತ್ ಹೋಮ್ವರ್ಕ್ ಮಾಡಿವೆ. ತಮ್ಮ ಸ್ಟಾರ್ಟಜಿ, ಪ್ಲಾನ್ಗಳನ್ನ ಹರಾಜಿನ ಟೇಬಲ್ನಲ್ಲಿ ಹೇಗೆ ವರ್ಕೌಟ್ ಮಾಡ್ತವೆ ಅನ್ನೋದನ್ನ ಕಾದು ನೋಡಬೇಕಿದೆ.
Discussion about this post