2013ರಲ್ಲಿ ತೆರೆಗೆ ಬಂದ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾ ನಟ ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಸಿಂಪಲ್ ಸುನಿ ಬಣ್ಣದ ಬದುಕನ್ನೇ ಬದಲಿಸಿತ್ತು. ಈ ಚಿತ್ರದಲ್ಲಿ ಆರ್.ಜೆ. ಆಗಿ ಕಾಣಿಸಿಕೊಂಡಿದ್ದರು ರಚನಾ. ರಚನಾ ನಿಜ ಜೀವನದಲ್ಲೂ ಆರ್.ಜೆ. ಆಗಿದ್ದರು. ಅವರ ವಯಸ್ಸೂ ಇನ್ನೂ 40 ದಾಟಿರಲಿಲ್ಲ. ಆಗಲೇ ಹೃದಯಾಘಾತ ಸಂಭವಿಸಿದೆ. ಸಣ್ಣ ವಯಸ್ಸಿಗೆ ಅವರು ಹೃದಯಾಘಾತದಿಂದ ಮೃತಪಟ್ಟಿರುವುದು ಬೇಸರದ ಸಂಗತಿ.ಜೆ.ಪಿ. ನಗರದಲ್ಲಿ ರಚನಾ ವಾಸವಾಗಿದ್ದರು. ಮನೆಯಲ್ಲೇ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ಅವರು ಮೃತಪಟ್ಟಿದ್ದಾರೆ. ಮೂರು ವರ್ಷಗಳ ಹಿಂದೆ ಅವರು ಆರ್ಜೆ ಕೆಲಸ ಬಿಟ್ಟಿದ್ದರು ಎಂದು ತಿಳಿದು ಬಂದಿದೆ.ರಚನಾ ತಂದೆತಾಯಿ ಚಾಮರಾಜಪೇಟೆಯಲ್ಲಿ ವಾಸವಿದ್ದರು. ಮಗಳ ಸಾವಿನ ಸುದ್ದಿ ಕೇಳಿ ತಂದೆ-ತಾಯಿಗೆ ತೀವ್ರ ನೋವಾಗಿದೆ.ರಚನಾ ಪಾರ್ಥಿವ ಶರೀರವನ್ನು ಚಾಮರಾಜಪೇಟೆ ನಿವಾಸಕ್ಕೆ ಕೊಂಡೊಯ್ಯುತಿರುವುದಾಗಿ ರಚನಾ ಸ್ನೇಹಿತರುತಿಳಿಸಿದ್ದಾರೆ. ಆರ್ಜೆ ಪ್ರದೀಪ್, ಆರ್ಜೆ ನೇತ್ರಾ ಸೇರಿ ಅನೇಕರು ರಚನಾ ಸಾವಿಗೆ ಸಂತಾಪ ಸೂಚಿಸಿದ್ದಾರೆ.ಯುವಜನತೆಯಲ್ಲಿ ಹೃದಯಾಘಾತ ಹೆಚ್ಚುತ್ತಿರುವುದ ಆತಂಕದ ವಿಚಾರ. ಕಳೆದ ವರ್ಷ ಪುನೀತ್ ರಾಜ್ಕುಮಾರ್ ಹೃದಯಾಘಾತದಿಂದ ಮೃತಪಟ್ಟಿದ್ದರು
Discussion about this post