ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿರುವ 15ನೇ ಆವೃತ್ತಿಯ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರಿನ ಮಾಜಿ ವೇಗಿ, ಹರ್ಷಲ್ ಪಟೇಲ್ ಪುನಃ ಆರ್ಸಿಬಿ ಪಾಲಾಗಿದ್ದಾರೆ.
ಕಳೆದ ಬಾರಿಯ ಆವೃತ್ತಿಯಲ್ಲಿ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದ ಹರ್ಷಲ್ ಪಟೇಲ್ ಆರ್ಸಿಬಿ ಪರ ಕಣಕಿಳಿದ್ದರು. ಈ ಆವೃತ್ತಿಯಲ್ಲಿ ಪಟೇಲ್ ಅಮೋಘ ಪ್ರದರ್ಶನ ನೀಡಿದ್ದರು, ಹೀಗಾಗಿ ಈ ಮೆಗಾ ಹರಾಜಿನಲ್ಲಿ ಪಟೇಲ್ ದಾಖಲೆಯ ಮೊತ್ತಕ್ಕೆ ಬಿಕರಿಯಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿತ್ತು. ಅದರಂತೆಯೇ ಈ ಯುವ ಬೌಲರ್ ಬರೋಬ್ಬರಿ 10.75 ಕೋಟಿಗೆ ಆರ್ಸಿಬಿ ಸೇರಿದ್ದಾರೆ.
ಪಟೇಲ್ರನ್ನು ಖರೀದಿಸಲು ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಕೊನೆಯದಾಗಿ ಹರ್ಷಲ್ ಮತ್ತೇ ಆರ್ಸಿಬಿ ಪಾಲಾಗುವುದರ ಮೂಲಕ ತಂಡ ಬೌಲಿಂಗ್ ವಿಭಾಗಕ್ಕೆ ಸಾಕಷ್ಟು ಬಲ ಬಂದತಾಗಿದೆ. ಇನ್ನು ಸ್ಫೋಟಕ ಆಟಗಾರ ಫಾಪ್ ಡು ಪ್ಲೆಸಿಸ್ ಕೂಡ ಆರ್ಸಿಬಿ ಪಾಲಾಗಿದ್ದಾರೆ.
WELCOME BACK to @RCBTweets @HarshalPatel23 #TATAIPLAuction @TataCompanies pic.twitter.com/us5hcfWnjW
— IndianPremierLeague (@IPL) February 12, 2022
Discussion about this post