ಸಿಎಂ ಬೊಮ್ಮಾಯಿ ನೇತೃತ್ವದ ಸಂಪುಟ ಪುನರ್‌ರಚನೆ ಹಿನ್ನೆಲೆ ಮತ್ತೆ ಸಚಿವ ಸ್ಥಾನದ ಆಸೆಯನ್ನು ಶಾಸಕ ಎಸ್.ಎ.ರಾಮದಾಸ್ ಬಿಚ್ಚಿಟ್ಟಿದ್ದಾರೆ. ಚಾಣಕ್ಯನ ಪ್ರತಿಪಾದನೆ ಮೂಲಕ ಸ್ಥಳೀಯರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಎಸ್.ಎ.ರಾಮದಾಸ್ ತಿಳಿಸಿದ್ದಾರೆ. ಸ್ಥಳೀಯರಿಗೆ ಆ ಮಣ್ಣಿನ ವಾಸನೆ, ಗುಣದ ಬಗ್ಗೆ ಗೊತ್ತಿರುತ್ತೆ. ಕಾಯಕಯೋಗಿ ಬಸವಣ್ಣ ಕೂಡ ಇದನ್ನೇ ಪ್ರತಿಪಾದಿಸಿದ್ರು. ಈ ನಿಟ್ಟಿನಲ್ಲಿ ಏಪ್ರಿಲ್ ನಂತರ ಸಿಎಂ ತೀರ್ಮಾನ ತೆಗೆದುಕೊಳ್ತಾರೆ. 1994ರಲ್ಲಿ ಮೈಸೂರಿನಲ್ಲಿ ಯಾರು ಇಲ್ಲದಾಗ ಐದು ಸ್ಥಾನ ಗೆದ್ದಿದ್ವಿ. 1997ರಲ್ಲಿ ನಾನೇ ಬಿ ಫಾರಂ ಹಂಚಿ ಏಳು ಸ್ಥಾನ ಗೆದ್ದಿದ್ವಿ ಎಂದು ಪರೋಕ್ಷವಾಗಿ ತಮಗೆ ಸಚಿವ ಸ್ಥಾನ ನೀಡಬೇಕೆಂದು ಶಾಸಕ SA.ರಾಮದಾಸ್ ಒತ್ತಾಯಿಸಿದ್ದಾರೆ. ಸಚಿವ ಸ್ಥಾನಕ್ಕಾಗಿ ಶಾಸಕ ರಾಮದಾಸ್ ತೀವ್ರ ಲಾಬಿ ನಡೆಸುತ್ತಿದ್ದು, ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಕೇಂದ್ರ-ರಾಜ್ಯ ನಾಯಕರ ಗಮನ ಸೆಳೆದಿದ್ದಾರೆ. ಇನ್ನ ಶಾಸಕ ರಾಮದಾಸ್ಗೆ ಈ ಬಾರಿ BJP ಹೈಕಮಾಂಡ್ ಅವಕಾಶ ನೀಡುತ್ತಾ ಎಂದು ಕಾದುನೋಡಬೇಕಿದೆ.
Discussion about this post