ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಅನ್ನೋ ವದಂತಿಯನ್ನ ಆಸ್ಪತ್ರೆ ತಳ್ಳಿ ಹಾಕಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ನಾರಾಯಣ ಹೆಲ್ತ್ ಸಿಟಿಯ ನಿರ್ದೇಶಕ ಡಾ.ನಿತಿನ್ ಮಂಜುನಾಥ್, ಸೌರವ್ ಗಂಗೂಲಿ ಅವರು ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಸುಳ್ಳು. ಅವರು ಬೆಂಗಳೂರಿನಲ್ಲಿದ್ದ ಕಾರಣ ನಾರಾಯಣ ಹೆಲ್ತ್ ಸಿಟಿ ಅಧ್ಯಕ್ಷ ಮತ್ತು ಸಂಸ್ಥಾಪಕ ಡಾ.ದೇವಿ ಪ್ರಸಾದ್ ಶೆಟ್ಟಿ ಅವರನ್ನು ಭೇಟಿ ಮಾಡಲು ಆಸ್ಪತ್ರೆಗೆ ಬಂದಿದ್ದರು. ಅವರು ಫೆಬ್ರವರಿ 14 ರಂದು ನಮ್ಮ ಆಸ್ಪತ್ರೆಯ ನೂತನ ಐಸಿಯು 100 ಬೆಡ್ಗಳನ್ನ ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಗಂಗೂಲಿ ಅವರಿಗೆ ಇತ್ತೀಚೆಗೆ ಲಘು ಹೃದಯಾಘಾತ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ನಾರಾಯಣ ಹೆಲ್ತ್ ಸಿಟಿಗೆ ದಾಖಲಾಗಿದ್ದಾರೆ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿತ್ತು.
Discussion about this post