ರಾಜ್ಯ ರಾಜ್ಯಕೀಯದ ಚಿತ್ತ 2023ರ ಚುನಾವಣೆಯತ್ತ ನೆಟ್ಟಿದೆ. ಅದರಲ್ಲೂ ಆಡಳಿತಾರೂಢ ಬಿಜೆಪಿ ಈಗಿನಿಂದಲೇ ಚುನಾವಣೆಗೆ ಸಿದ್ಧತೆ ನಡೆಸಿದೆ. ಇದೇ ಲೆಕ್ಕಾಚಾರದಲ್ಲಿ ಶೀಘ್ರದಲ್ಲೇ ಎಲೆಕ್ಷನ್ ಕ್ಯಾಬಿನೆಟ್ ರಚನೆಗೆ ತಂತ್ರ ರೂಪಿಸಿದೆ. ಅದಕ್ಕೂ ಮೊದಲು ನಿಗಮ ಮಂಡಳಿಗಳ ನೇಮಕಾತಿಗೆ ಸಿಎಂ ಯೋಜನೆ ಹಾಕಿಕೊಂಡಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಗೆ ರಾಜ್ಯ ರಾಜ್ಯಕೀಯದಲ್ಲಿ ಈಗೀನಿಂದಲೇ ತಾಲೀಮು ಶುರುವಾಗಿದೆ. ಮುನ್ನಲೆಯಲ್ಲಿರೋ ಮೂರೂ ರಾಜ್ಯಕೀಯ ಪಕ್ಷಗಳು ಸಾಕಷ್ಟು ತಂತ್ರ ರಣತಂತ್ರಗಳನ್ನ ಹೆಣೆಯುತ್ತಿವೆ. ಈ ಪೈಕಿ ಆಡಳಿತಾರೂಡ ಬಿಜೆಪಿ ಮತ್ತೊಮ್ಮೆ ಆಡಳಿತದ ಚುಕ್ಕಾಣೆ ಹಿಡಿಯೋಕೆ ಹವಣಿಸುತ್ತಿದೆ. ಇದೇ ಲೆಕ್ಕಾಚಾರದಲ್ಲಿ ಆದಷ್ಟೂ ಬೇಗ ಎಲೆಕ್ಷನ್ ಕ್ಯಾಬಿನೆಟ್ ರಚನೆಗೂ ಮುಹೂರ್ತ ಸಿದ್ಧವಾಗಿದೆ. ಅದಕ್ಕೂ ಮೊದಲು ಸಚಿವ ಸ್ಥಾನ ಆಕಾಂಕ್ಷಿಗಳನ್ನು ಸಮಾಧಾನ ಪಡಿಸಲು ನಿಗಮ ಸ್ಥಾನಗಳನ್ನು ನೀಡೋಕೂ ಪ್ಲಾನ್ ಸಿದ್ಧವಾಗಿದೆ. ಆದ್ರೆ ವರಿಷ್ಠರ ನಿಗಮ ಪ್ಲಾನ್ಗೆ ಆಕಾಂಕ್ಷಿಗಳು ನೋ ಅಂತಿದ್ದಾರೆ.
‘ಎಲೆಕ್ಷನ್ ಕ್ಯಾಬಿನೆಟ್’ಗೂ ಮುನ್ನ ನಿಗಮ ನೇಮಕ ಪ್ಲಾನ್
ಹೌದು, ಮುಂದಿನ ವಿಧಾನಸಬಾ ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡು ಸದ್ಯದಲ್ಲೇ ಎಲೆಕ್ಷನ್ ಕ್ಯಾಬಿನೆಟ್ ರಚನೆಯಾಗಲಿದೆ. ಎಲೆಕ್ಷನ್ ಕ್ಯಾಬಿನೆಟ್ ಬಗ್ಗೆ ಉನ್ನತಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಅತ್ತ ಚರ್ಚೆ ನಡೀತಿದ್ದಂತೆ ಆಕಾಂಕ್ಷಿಗಳು ಸಚಿವ ಸ್ಥಾನಕ್ಕಾಗಿ ಲಾಬಿ ಶುರುಮಾಡಿದ್ದಾರೆ. ಇದ್ರಿಂದ ಹೊಸ ತಲೆನೋವು ಸೃಷ್ಟಿಯಾಗೋದು ಬೇಡ ಅಂತಾ ಮೊದಲು ನಿಗಮ ಮಂಡಳಿಗಳಿಗೆ ನೇಮಕ ಮಾಡಲು ಸಿಎಂ ಪ್ಲಾನ್ ಮಾಡಿದ್ದರು. ಆದ್ರೆ ಮಂತ್ರಿಗಿರಿ ಮೇಲೆ ಹಲವು ಸಮಯದಿಂದ ಕಾದುಕೂತಿದ್ದ ಆಕಾಂಕ್ಷಿಗಳು ನಿಗಮ ಅಧ್ಯಕ್ಷ ಸ್ಥಾನ ಬೇಡವೇ ಬೇಡ ಅಂತಾ ಪಟ್ಟು ಹಿಡಿದು ಕೂತಿದ್ದಾರೆ. ಇದು ಕೇಸರಿ ನಾಯಕರಿಗೆ ಹೊಸ ತಲೆನೋವಿಗೆ ಕಾರಣವಾಗಿದೆ.
ನಿಗಮ ಮಂಡಳಿ ಸ್ಥಾನ ಬೇಡ, ಸಚಿವರಾಗ್ತೀವಿ!
- 1 : ಸಚಿವ ಸ್ಥಾನಾಕಾಂಕ್ಷಿಗಳಿಂದ ನಿಗಮ ನೇಮಕಕ್ಕೆ ವಿರೋಧ
- 2 : ನಮ್ಮನ್ನು ಸಂಪುಟಕ್ಕೆ ಪರಿಗಣಿಸಿ, ನಿಗಮ ಮಂಡಳಿ ಸ್ಥಾನ ಬೇಡ
- 3 : ರಾಜ್ಯದಲ್ಲಿ ಎಲೆಕ್ಷನ್ಗೆ ಇನ್ನು ಒಂದು ವರ್ಷ ಮಾತ್ರ ಬಾಕಿಯಿದೆ
- 4 : ಈ ವೇಳೆ ನಿಗಮ ಮಂಡಳಿ ಸ್ಥಾನ ಪಡೆದು ಏನು ಮಾಡುವುದು?
- 5 : ನಮ್ಮನ್ನು ಕೂಡ ಎಲೆಕ್ಷನ್ ಕ್ಯಾಬಿನೆಟ್ಗೆ ಸೇರ್ಪಡೆ ಮಾಡಿಕೊಳ್ಳಿ
- 6 : ರಾಜ್ಯದಲ್ಲಿ ಬೆಳೆಯುವ ಆಸೆಯಿದೆ, ಕ್ಷೇತ್ರಕ್ಕೆ ಸೀಮಿತ ಮಾಡಬೇಡಿ
- 7 : ಸಂಪುಟಕ್ಕೆ ಸೇರಿಸಿಕೊಳ್ಳಿ ಇಲ್ಲವಾದರೆ ಶಾಸಕರಾಗಿಯೇ ಇರ್ತಿವಿ
- 8 : ಈಗಾಗಲೇ ರಾಜ್ಯಾಧ್ಯಕ್ಷ ಕಟೀಲ್ ಅವರ ಗಮನಕ್ಕೂ ತಂದಿದ್ದೇವೆ
- 9 : ನೇಮಕ ಆದೇಶ ಮಾಡೋದು, ನಾವು ನಿರಾಕರಿಸುವುದು ಬೇಡ
- 10 : ನಮ್ಮನ್ನ ಸಚಿವರನ್ನಾಗಿ ಮಾಡಿ ರಾಜ್ಯಮಟ್ಟದಲ್ಲಿ ಬೆಳೆಸಿ
ರಾಜ್ಯ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ತಂತ್ರಗಾರಿಗೆ ಈಗಿನಿಂದಲೇ ಶುರುಮಾಡಿದೆ. ಗುಜರಾತ್ ಮಾದರಿಯಲ್ಲಿ ಎಲೆಕ್ಷನ್ ಕ್ಯಾಬಿನೆಟ್ ರಚನೆ ಮಾಡೋ ಮೂಲಕ ಪಕ್ಷ ಬಲಪಡಿಸೋಕೆ ಮುಂದಾಗಿದೆ. ಆದ್ರೆ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿ ನೇಮಕಕ್ಕೆ ಮುಂದಾಗಿರೋ ಕಮಲ ನಾಯಕರಿಗೆ ಆಕಾಂಕ್ಷಿಗಳ ಹೊಸ ಬೇಡಿಕೆ ತಲೆ ನೋವು ತಂದಿಟ್ಟಿದೆ.
Discussion about this post