ಬೆಂಗಳೂರು: ತಪಾಸಣೆ ವೇಳೆ ಆರೋಗ್ಯ ಸಿಬ್ಬಂದಿ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡೆದುಕೊಂಡಿರುವ ರೀತಿ, ಅವರ ಕಲ್ಚರ್ ತೋರಿಸುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ನಿನ್ನೆ ಡಿ.ಕೆ.ಶಿವಕುಮಾರ್ ಕೋವಿಡ್ ಟೆಸ್ಟ್ ಮಾಡಲು ಬಂದ ಆರೋಗ್ಯ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದರು.
ಇದಕ್ಕೆ ಇಂದು ಪ್ರತಿಕ್ರಿಯೆ ನೀಡಿರುವ ಬೊಮ್ಮಾಯಿ.. ಅವರು ಆರೋಗ್ಯದ ಬಗ್ಗೆ ಚಿಂತನೆ ಮಾಡಬೇಕಾಗಿತ್ತು. ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಸಿಬ್ಬಂದಿ ತಮ್ಮ ಕರ್ತವ್ಯದ ಮೇಲೆ ಅಲ್ಲಿಗೆ ಹೋಗಿದ್ದರು.
ಶಿವಕುಮಾರ್ ಒಬ್ಬರಿಗೆ ಮಾತ್ರವಲ್ಲ ಎಲ್ಲರನ್ನೂ ತಪಾಸಣೆಗೆ ಒಳಪಡಿಸಬೇಕಾಗಿತ್ತು. ಇದನ್ನ ಅರ್ಥ ಮಾಡಿಕೊಳ್ಳದ ಶಿವಕುಮಾರ್ ಬಾಯಿಗೆ ಬಂದ್ಹಾಗೆ ಮಾತನಾಡಿದ್ದಾರೆ. ಏನೂ ಮಾಡೋಕೆ ಆಗುತ್ತೆ? ಅದು ಅವರ ಸಂಸ್ಕೃತಿ, ನಾವು ಅವರ ಆರೋಗ್ಯದ ಬಗ್ಗೆ ಚಿಂತನೆಯನ್ನ ಮಾಡಿದ್ವಿ ಎಂದಿದ್ದಾರೆ.
Discussion about this post