ಐಪಿಎಲ್ ಮೆಗಾ ಆಕ್ಷನ್ಗೆ ಕೌಂಟ್ಡೌನ್ ಶುರುವಾಗಿದೆ. ಇಂದು ಹಾಗೂ ನಾಳೆ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ದೇಶ, ವಿದೇಶಗಳ ಒಟ್ಟು 590 ಆಟಗಾರರು ಹರಾಜಿಗೆ ಲಭ್ಯರಿದ್ದಾರೆ.
ಇದರಲ್ಲಿ 370 ಭಾರತೀಯ ಕ್ರಿಕೆಟರ್ಸ್ ಹಾಗೂ 220 ವಿದೇಶಿ ಆಟಗಾರರಿದ್ದಾರೆ. ಲೀಗ್ಗೆ ಈ ಬಾರಿ ಗುಜರಾತ್ ಟೈಟಾನ್ಸ್ ಹಾಗೂ ಲಕ್ನೋ ಸೂಪರ್ಜೈಂಟ್ಸ್ ಎರಡು ತಂಡಗಳು ಸೇರಿಕೊಂಡಿದ್ದು, ಹರಾಜು ಪ್ರಕ್ರಿಯೆಯು ಹಿಂದಿಗಿಂತ ಮತ್ತಷ್ಟು ರೋಚಕತೆಯಿಂದ ಕೂಡಿರಲಿದೆ. ಈಗಾಗ್ಲೇ ಎಲ್ಲಾ ಫ್ರಾಂಚೈಸಿಗಳು ಕೆಲ ಆಟಗಾರರನ್ನ ರಿಟೇನ್ ಮಾಡಿಕೊಂಡಿವೆ.
ಎಲ್ಲಾ ಹತ್ತು ತಂಡಗಳ ಫ್ರಾಂಚೈಸಿಗಳು ಘಟಾನುಘಟಿ ಆಟಗಾರರ ಮೇಲೆ ಕಣ್ಣಿಟ್ಟಿದ್ದು, ಆಟಗಾರರ ಎದೆಬಡಿತ ಜೋರಾಗಿದೆ. ಡೇವಿಡ್ ವಾರ್ನರ್, ಶಿಖರ್ ಧವನ್, ಜಾನಿ ಬೇರ್ ಸ್ಟೋ, ಮಹಮ್ಮದ್ ಶಮಿ, ಸುರೇಶ್ ರೈನಾ ಸೇರಿದಂತೆ ಇನ್ನು ಹಲವು ಬಿಗ್ ಸ್ಟಾರ್ಸ್ ಹರಾಜು ಕಣದಲ್ಲಿದ್ದಾರೆ. ಯಾವ ಆಟಗಾರ ಎಷ್ಟು ಮೊತ್ತಕ್ಕೆ ಯಾವ ತಂಡದ ಪಾಲಾಗ್ತಾರೆ ಅನ್ನೋ ಕುತೂಹಲಕ್ಕೆ 2 ದಿನದಲ್ಲಿ ತೆರೆ ಬೀಳಲಿದೆ.
Discussion about this post