ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,94,720 ಕೊರೊನಾ ಕೇಸ್ಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ನಿನ್ನೆ 1.68 ಕೇಸ್ಗಳು ಪತ್ತೆಯಾಗಿದ್ದವು, ಆದರೆ ಇಂದು ನಿನ್ನೆಗಿಂತ ಶೇಕಡ 15.8 ರಷ್ಟು ಹೆಚ್ಚು ಸೋಂಕು ಪತ್ತೆಯಾಗಿದೆ. ಈ ಮೂಲಕ ಪಾಸಿಟಿವಿಟಿ ರೇಟ್ 11.5ಕ್ಕೆ ಏರಿಕೆ ಆಗಿದೆ.
ಮಾತ್ರವಲ್ಲ ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 4,868 ಕ್ಕೆ ಬಂದು ನಿಂತಿದೆ.
ಮಹಾರಾಷ್ಟ್ರದಲ್ಲಿ 1,281 ಒಮಿಕ್ರಾನ್ ಕೇಸ್ ಇದ್ದರೆ, ರಾಜಸ್ಥಾನದಲ್ಲಿ 645 ಒಮಿಕ್ರಾನ್ ಕೇಸ್ ಪತ್ತೆಯಾಗಿದೆ.
ನಿನ್ನೆ ಒಂದೇ ದಿನ 442 ಸೋಂಕಿತರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 9,55,319ಕ್ಕೆ ಏರಿಕೆ ಆಗಿದೆ. ಭಾರತದಲ್ಲಿ ನಿನ್ನೆ 1,68,063 ಪ್ರಕರಣಗಳು ವರದಿಯಾಗಿತ್ತು. ಈ ಮೂಲಕ ಒಂದೇ ದಿನ ದೇಶದಲ್ಲಿ 26 ಸಾವಿರಕ್ಕೂ ಹೆಚ್ಚು ಕೇಸಸ್ ದಾಖಲಾಗಿವೆ.
Discussion about this post