ದೇಶದಲ್ಲಿ ಕೊರೊನಾ, ಒಮಿಕ್ರಾನ್ ಹಾವಳಿ ಹೆಚ್ಚಾಗ್ತಿದ್ದಂತೆ ಕೇಂದ್ರ ಸರ್ಕಾರ ಅಲರ್ಟ್ ಆಗಿದೆ. ಕರ್ನಾಟಕ ಸೇರಿದಂತೆ ಸೋಂಕು ಹೆಚ್ಚಿರುವ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ ನಡೆಸಿದ್ರು. ಕೊರೊನಾಗೆ ಬ್ರೇಕ್ ಹಾಕಲು ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಗತ್ಯ ಸಹಕಾರ ನೀಡೋದಾಗಿ ತಿಳಿಸಿದ್ರು.
Speaking at meeting with the Chief Ministers. https://t.co/VDA7WeB7UA
— Narendra Modi (@narendramodi) January 13, 2022
ಕೊರೊನಾ, ಒಮಿಕ್ರಾನ್ ಎದುರಿಸಲು ಭಾರತ ಸಿದ್ಧವಾಗಿದೆ
ದೇಶದ ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರ್ಕಾರದಿಂದ ಸಹಕಾರ
ಮಿಂಚಿನ ವೇಗ.. ದೇಶಾದ್ಯಂತ ಕೊರೊನಾ ಮಿಂಚಿನ ವೇಗ ಪಡೆದುಕೊಳ್ತಿದೆ. ರೂಪಾಂತರಿ ಒಮಿಕ್ರಾನ್ ಕೊರೊನಾ ವೇಗವನ್ನ ಮತ್ತಷ್ಟು ಹೆಚ್ಚಿಸ್ತಿದೆ. ಸದ್ಯ ಹೆಮ್ಮಾರಿಯ ವೇಗ ನೋಡಿದ್ರೆ ಹಳೆಯ ಕರಾಳ ಅಧ್ಯಾಯ ಮತ್ತೆ ಮರುಕಳಿಸುತ್ತಾ ಅನ್ನೊ ಆತಂಕ ಹುಟ್ಟಿಕೊಂಡಿದೆ. ಹೀಗೆ ದೇಶಾದ್ಯಂತ ಕೊರೊನಾ ಆತಂಕ ಮನೆಮಾಡಿದ ಬೆನ್ನಲ್ಲೇ ಪ್ರಧಾನಿ ಮೋದಿ ಇವತ್ತು ಮಹತ್ವದ ಸಭೆ ನಡೆಸಿದ್ರು. ಕೊರೊನಾ ಎದುರಿಸೋದಕ್ಕೆ ಭಾರತ ಸರ್ವ ರೀತಿಯಲ್ಲೂ ಸಿದ್ಧವಾಗಿದೆ ಅಂದ್ರು. ದೇಶದ ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರ್ಕಾರ ಸಹಕರಿಸೋದಾಗಿ ತಿಳಿಸಿದ್ರು.
ಸ್ಥಳೀಯ ಕಂಟೇನ್ಮೆಂಟ್ಗಳ ಮೇಲೆ ಹೆಚ್ಚಿನ ಗಮನ ಹರಿಸಿದರೆ ತುಂಬಾ ಒಳ್ಳೆಯದು. ಎಲ್ಲೆಲ್ಲಿ ಹೆಚ್ಚೆಚ್ಚು ಕೇಸ್ಗಳು ಬರುತ್ತವೆ, ಅಲ್ಲೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಟೆಸ್ಟಿಂಗ್ ನಡೆಸಬೇಕಾಗಿದೆ. ಇದನ್ನು ಖಚಿತಪಡಿಸಿಕೊಳ್ಳೋದು ಅವಶ್ಯಕವಾಗಿದೆ. ಇದರ ಜೊತೆಗೆ ಹೋಮ್ ಐಸೋಲೇಷನ್ನಲ್ಲಿರುವವರಿಗೂ ಹೆಚ್ಚಿನ ಪ್ರಮಾಣದಲ್ಲಿ ಚಿಕಿತ್ಸೆ ನೀಡಬೇಕಾಗಿದೆ.
ಈ ಸವಾಲಿನಿಂದ ಪಾರಾಗುವ ನಿಟ್ಟಿನಲ್ಲಿ ನಮ್ಮ ಸಿದ್ಧತೆ ಮುಖ್ಯಾಗಿದೆ. ಸದ್ಯ ರಾಜ್ಯಗಳ ಬಳಿ ಅಗತ್ಯಕ್ಕೆ ತಕ್ಕಷ್ಟು ಲಸಿಕೆ ಇದೆ. ಫ್ರಂಟ್ಲೈನ್ ವರ್ಕರ್ಸ್ ಹಾಗೂ ಹಿರಿಯರಿಗೆ ಪ್ರಿಕಾಷನ್ ಡೋಸ್ ಎಷ್ಟು ಸಾಧ್ಯವೋ ಅಷ್ಟು ಬೇಗ ಕೊಟ್ರೆ ನಮ್ಮ ವೈದ್ಯಕೀಯ ವ್ಯವಸ್ಥೆಯ ಸಾಮರ್ಥ್ಯ ಹೆಚ್ಚಾಗಲಿದೆ.
ನರೇಂದ್ರ ಮೋದಿ, ಪ್ರಧಾನಿ
ಇನ್ನು ಸಭೆಯಲ್ಲಿ ರಾಜ್ಯದ ಎಲ್ಲಾ ಸಿಎಂಗಳ ಜೊತೆ ಪ್ರಧಾನಿ ಮೋದಿ ಚರ್ಚಿ ನಡೆಸಿದ್ರು. ಮೊದಲು ಸಿಎಂ ಬೊಮ್ಮಾಯಿ ಜೊತೆಯಲ್ಲೇ ಚರ್ಚೆ ಆರಂಭಿಸಿದ್ರು. ರಾಜ್ಯದ ಕೊರೊನಾ ಸ್ಥಿತಿಗತಿಗಳ ಬಗ್ಗೆ ಹಾಗೂ ಸರ್ಕಾರ ಕೈಗೊಂಡಿರೋ ಕಠಿಣ ಕ್ರಮಗಳ ಬಗ್ಗೆ ಸಿಎಂ ಬೊಮ್ಮಾಯಿ ಪ್ರಧಾನಿ ಮೋದಿಗೆ ಮಾಹಿತಿ ನೀಡಿದ್ರು.
ಪ್ರಧಾನಿ ಮೋದಿಗೆ ಸಿಎಂ ಮಾಹಿತಿ
01. ರಾಜ್ಯದ ಕೊರೊನಾ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದ ಸಿಎಂ
02. ನೈಟ್ & ವೀಕೆಂಡ್ ಕರ್ಫ್ಯೂ ಕ್ರಮಗಳ ಬಗ್ಗೆ ಸಿಎಂ ಮಾಹಿತಿ
03. ಬೆಂಗಳೂರಿನಲ್ಲಿ ಕೇಸ್ ಹೆಚ್ಚಳದ ಬಗ್ಗೆ ಸಿಎಂ ವಿವರಣೆ
04. ಬೆಂಗಳೂರಿನಲ್ಲಿ ಈಗಾಗಲೇ ಕಠಿಣ ನಿಯಮ ಜಾರಿಯಾಗಿದೆ
05. ನಿತ್ಯವೂ ಕೊರೊನಾ ಟೆಸ್ಟಿಂಗ್ ಪ್ರಮಾಣವನ್ನ ಹೆಚ್ಚಿಸಿಲಾಗಿದೆ
06. ಅಗತ್ಯ ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಆಸ್ಪತ್ರೆಗಳ ಸಿದ್ಧತೆ ಆಗಿದೆ
07. ಲಸಿಕೆ ಅಭಿಯಾನವನ್ನು ಮತ್ತಷ್ಟು ಚುರುಕು ಮಾಡಲಾಗಿದೆ
08. ಬಹುತೇಕ 100% ಮೊದಲ ಡೋಸ್ ಲಸಿಕೆ ನೀಡಲಾಗಿದೆ
09. ಕೇಂದ್ರದ ಎಲ್ಲಾ ಮಾರ್ಗಸೂಚಿ ಅನುಷ್ಠಾನ ಮಾಡಲಾಗಿದೆ
10. ಮುಂದೆ ಕೇಂದ್ರ ನೀಡುವ ಎಲ್ಲಾ ಸೂಚನೆ ಪಾಲಿಸೋದಾಗಿ ಪ್ರಧಾನಿ ಮೋದಿಗೆ ಸಿಎಂ ಬೊಮ್ಮಾಯಿ ತಿಳಿಸಿದ್ರು.
Discussion about this post