ಭಾರತದಲ್ಲಿ ದಿನೇ ದಿನೆ ಕೊವಿಡ್ ಪ್ರಕರಣ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗ್ತಿದೆ. ಈ ಕಾರಣದಿಂದ ಈಗಾಗಲೇ ಎಲ್ಲಾ ದೇಶಿ ಟೂರ್ನಿಗಳನ್ನ ಬಿಸಿಸಿಐ ರದ್ದು ಪಡಿಸಿದೆ. ಇದೀಗ ಬಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಮೇಲೂ ಕೊರೊನಾ ಕರಿಛಾಯೆ ಬೀರಿದೆ. ಹಾಗಿದ್ರೂ ಶತಯಾಗತಾಯ ಐಪಿಎಲ್ ನಡೆಸಿಯೇ ತೀರ್ತಿವಿ ಅನ್ನೋ ಲೆಕ್ಕಾಚಾರ ಬಿಸಿಸಿಐನದ್ದಾಗಿದೆ.
ಒಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ಗೆ ಭರ್ಜರಿ ಸಿದ್ಧತೆ ಆರಂಭವಾಗಿದೆ. ಈಗಾಗಲೇ ಆಕ್ಷನ್ಗೆ ದಿನಾಂಕವನ್ನ ಬಿಸಿಸಿಐ ಫೈನಲ್ಗೊಳಿಸಿಕೊಂಡಿದ್ದು, ಫ್ರಾಂಚೈಸಿಗಳು ಕೂಡ ಭರದ ಸಿದ್ಧತೆ ನಡೆಸಿವೆ. ಆದ್ರೆ, ಮೆಗಾ ಆಕ್ಷನ್ಗೂ ಮುನ್ನವೇ ಬಿಸಿಸಿಐಗೆ ಟೂರ್ನಿ ಆಯೋಜನೆಯ ಚಿಂತೆ ಕಾಡ್ತಿದೆ. ಭಾರತದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರೋ ಕೊರೊನಾ ಪ್ರಕರಣಗಳ ಸಂಖ್ಯೆ ಬಿಗ್ಬಾಸ್ಗಳನ್ನ ಚಿಂತೆಗೆ ದೂಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ಗೂ ತಟ್ಟಿದ ಕೊರೊನಾ ಕಾಟ
ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ದೇಶಿ ಕ್ರಿಕೆಟ್ ಟೂರ್ನಿಗಳ ಬಿಸಿಸಿಐ ರದ್ದುಗೊಳಿಸಿದೆ. ಇಷ್ಟೇ ಅಲ್ಲ.. ಬೆಂಗಳೂರಿನಲ್ಲಿ ನಡೆಸುಬೇಕು ಅಂದುಕೊಂಡಿರುವ ಮೆಗಾ ಆಕ್ಷನ್ ಮೇಲೂ ಕೊರೊನಾ ಕರಿ ನೆರಳು ಬಿದ್ದಿದೆ. ಹಾಗಿದ್ರೂ ಕೂಡ ಶತಾಯಗತಾಯ ಐಪಿಎಲ್ ಟೂರ್ನಿಯನ್ನ ನಡೆಸಿಯೇ ತೀರೋ ಲೆಕ್ಕಾಚಾರದಲ್ಲಿ ಬಿಸಿಸಿಐಯಿದೆ.
ಪ್ಲಾನ್ ಎ ವರ್ಕೌಟ್ ಆಗ್ದಿದ್ರೆ, ಪ್ಲಾನ್ ಬಿ ಸಿದ್ಧ
ಭಾರತದಲ್ಲೇ ಐಪಿಎಲ್ ಆಯೋಜನೆ ಮಾಡೋದು ಬಿಗ್ಬಾಸ್ಗಳ ಮೊದಲ ಆದ್ಯತೆಯಾಗಿದೆ. ಆದ್ರೆ, ಕೊರೊನಾ ಸಂಖ್ಯೆಗಳಲ್ಲಿ ಗಣನೀಯವಾಗಿ ಏರಿಕೆ ಕಂಡರೆ ಪ್ಲಾನ್ ಬಿಯನ್ನ ವರ್ಕೌಟ್ ಮಾಡೋದು ಬಿಸಿಸಿಐನ ಪ್ಲಾನ್ ಆಗಿದೆ. ಮೂಲಗಳ ಪ್ರಕಾರ ಈ ಬಗ್ಗೆ ಈಗಾಗಲೇ ಚರ್ಚಿಸಿರುವ ಆಡಳಿತಾಧಿಕಾರಿಗಳು ಕೊರೊನಾ ಹೆಚ್ಚಾದ್ರೆ, ಸೌತ್ ಆಫ್ರಿಕಾ, ಶ್ರೀಲಂಕಾ ಅಥವಾ ಯುಎಇನಲ್ಲಿ ಟೂರ್ನಿಯನ್ನ ನಡೆಸಲು ಪ್ಲಾನ್ ಹಾಕಿಕೊಂಡಿದೆ.
ದೊಡ್ಡದಾಗಿದೆ ಟೂರ್ನಿ, ಹೆಚ್ಚಿದೆ ಜವಾಬ್ದಾರಿ
ಈ ಬಾರಿಯ ಟೂರ್ನಿಯ ಆಯೋಜನೆ ಬಿಸಿಸಿಐಗೆ ಸವಾಲಿನದ್ದಾಗಿದೆ. 2 ಹೆಚ್ಚುವರಿ ತಂಡಗಳ ಸೇರ್ಪಡೆಯಿಂದ ಟೂರ್ನಿಯ ಫಾರ್ಮೆಟ್ ಬದಲಾಗಿದೆ. ಜೊತೆಗೆ ಆಟಗಾರರ ಸಂಖ್ಯೆಯೂ ಹೆಚ್ಚಾಗಲಿದೆ. ಹೀಗಾಗಿ ಕಠಿಣ ಬಬಲ್ ನಿಯಮಗಳೊಂದಿಗೆ ಸುರಕ್ಷಿತವಾಗಿ ಟೂರ್ನಿ ಆಯೋಜಿಸಬೇಕಾದ ಜವಾಬ್ದಾರಿ ಬಿಸಿಸಿಐ ಹೆಗಲೇರಿದೆ. ಜೊತೆಗೆ ಇತಂಹ ಸಂದಿಗ್ಧ ಪರಿಸ್ಥಿತಿ ವಿದೇಶಿ ಮಂಡಳಿಗಳನ್ನ ಒಪ್ಪಿಸಿ ಆಟಗಾರರನ್ನ ಕರೆತರುವುಲ್ಲದೇ, ಅವರ ಸುರಕ್ಷತೆಯ ರೆಸ್ಪಾನ್ಸಿಬಿಲಿಟಿಯನ್ನೂ ಬಿಸಿಸಿಐ ಹೊರಬೇಕಿದೆ.
ಒಟ್ಟಿನಲ್ಲಿ ಕೊರೊನಾ ಆತಂಕದ ನಡುವೆಯೂ ಬಿಸಿಸಿಐ ಐಪಿಎಲ್ ನಡೆಸಿಯೇ ತೀರುವ ಇರಾದೆಯಲ್ಲಿರೋದಂತೂ ಸ್ಪಷ್ಟವಾಗಿದೆ. ಆದ್ರೆ, ಎಲ್ಲಿ? ಹೇಗೆ? ಎಷ್ಟು ಸುರಕ್ಷಿತವಾಗಿ ಆಯೋಜನೆ ಮಾಡಬೇಕು? ಅನ್ನೋದನ್ನ ಇನ್ನು ಮುಂದಷ್ಟೇ ನಿರ್ಧರಿಸಬೇಕಿದೆ.
Discussion about this post