ಸಿಲಿಕಾನ್ ಸಿಟಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಜ್ವರ ಶುರುವಾಗಿದೆ. ಅಂತೆಯೇ ನಿನ್ನೆ ಬೆಳಿಗ್ಗೆಯಿಂದ ಆಟಗಾರರ ಮೆಗಾ ಹರಾಜು ನಡೆಯುತ್ತಿದ್ದು, ಪ್ಲೇಯರ್ಸ್ ಮೇಲೆ ಫ್ರಾಂಚೈಸಿಗಳು ಹಣದ ಹೊಳೆಯನ್ನೇ ಹರಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಇಲ್ಲಿಯವರೆಗೆ 55 ಆಟಗಾರರು ಬಿಕರಿಯಾಗಿದ್ದಾರೆ. ಇದರಲ್ಲಿ 17 ಆಟಗಾರರು ವಿದೇಶಿಗರಾಗಿದ್ದಾರೆ.
ವಿಶೇಷ ಎಂಬಂತೆ ಈ ಬಾರಿಯ ಆಕ್ಷನ್ನಲ್ಲಿ ಫ್ರಾಂಚೈಸಿಗಳ ಕಣ್ಣು ನೇರವಾಗಿ ಬೌಲರ್ಸ್ ಮೇಲೆ ನೆಟ್ಟಿದೆ ಎನ್ನಲಾಗ್ತಿದೆ. ಯಾಕಂದ್ರೆ ಹಲವಾರು ಬೌಲರ್ಗಳು ದುಬಾರಿ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಶ್ರೀಲಂಕಾ ಮೂಲದ ವನಿಂದು ಹಸರಂಗಾ ಐಪಿಎಲ್ನಲ್ಲಿ ಒಂದೇ ಒಂದು ವಿಕೆಟ್ ಪಡೆಯದೇ ಇದ್ದರು, 10.75 ಕೋಟಿಗೆ ಆರ್ಸಿಬಿ ಪಾಲಾಗಿದ್ದಾರೆ. ಜೊತೆಗೆ ದೀಪಕ್ ಚಹರ್ ಸಿಎಸ್ಕೆಯ ಇತಿಹಾಸದಲ್ಲಿಯೇ ಹರಾಜಿನಲ್ಲಿ ಖರೀದಿಸಿದ ಅತೀ ದುಬಾರಿ ಆಟಗಾರನಾಗಿ 14 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ. ಇನ್ನುಳಿದಂತೆ ಪ್ರಸಿದ್ಧ ಕೃಷ್ಣ, ಹಾಗೂ ಲೂಕಿ ಫರ್ಗೂಸನ್ 10 ಕೋಟಿ ರೂಪಾಯಿಗೆ ಕ್ರಮವಾಗಿ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ಗೆ ಸೇರ್ಪಡೆಯಾಗಿದ್ದಾರೆ. ಹೀಗೆ ಇನ್ನು ಕೆಲವು ಬೌಲರ್ಗಳು ಹರಾಜಿನಲ್ಲಿ ಬಂಪರ್ ಬಾರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಮುಂಬೈ ಇಂಡಿಯನ್ಸ್ ಆಟಗಾರ ಹಾಗೂ ಟೀಂ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ ಜಸ್ಪ್ರೀತ್ ಬೂಮ್ರಾ, ತಲೆ ಚಚ್ಚಿಕೊಂಡಿದ್ದಾರೆ.. ಹೌದು ಈ ಕುರಿತು ತಮ್ಮ ಟ್ವೀಟರ್ನಲ್ಲಿ ರಿಯಾಕ್ಟ್ ಮಾಡಿದ ಅವರು ತಲೆ ಚಚ್ಚಿಕೊಳ್ಳುತ್ತಿರುವ ಎಮೋಜಿ ಹಾಕಿದ್ದಾರೆ. ಬೂಮ್ರಾರ ಈ ರಿಯಾಕ್ಷನ್ಗೆ ಕಮೆಂಟ್ ಮಾಡಿದ ನೆಟ್ಟಿಗರು ನಿಮಗೆ ಬಂಪರ್ ಹೊಡಿಯಲಿಲ್ವಾ ಅಂತಾ ಕಾಲೆಳೆದಿದ್ದಾರೆ. ಇನ್ನು ಬೂಮ್ರಾರನ್ನು ಮಂಬೈ ಇಂಡಿಯನ್ಸ್ 12 ಕೋಟಿಗೆ ರೀಟೈನ್ ಮಾಡಿಕೊಂಡಿದೆ..
😂🤦♂️
— Jasprit Bumrah (@Jaspritbumrah93) February 12, 2022
Discussion about this post