ಕರಾವಳಿ ಭಾಗದಲ್ಲಿ ಹಿಜಾಬ್ ನಿಷೇಧ ವಿವಾದ ಪರಿಸ್ಥಿತಿ ಕೈ ಮೀರುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಶಾಸಕ ತನ್ವೀರ್ ಸೇಠ್ ಎಚ್ಚರಿಕೆ ಪತ್ರ ಬರೆದಿದ್ದಾರೆ. ಸಿಎಂ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವರಿಗೆ ಪ್ರತ್ಯೇಕ ಪತ್ರ ಬರೆದ ತನ್ವೀರ್ ಸೇಠ್, ಇಸ್ಲಾಂನಲ್ಲಿ ಹಿಜಾಬ್ ಧರಿಸುವುದು, ಸಿಖ್ನಲ್ಲಿ ಪೇಟ ಧರಿಸುವುದು, ಕ್ರೈಸ್ತರಲ್ಲಿ ದೀಕ್ಷೆ ಪಡೆದು ಸ್ಕರ್ಟ್ ಧರಿಸುವುದು ಅನಾದಿ ಕಾಲದ ಸಂಪ್ರದಾಯ. ಇದಕ್ಕೆ ಇಲ್ಲಿಯವರೆಗೂ ಯಾವುದೇ ತಡೆ, ನಿಷೇಧ ಹೇರಿಲ್ಲ.
ನಾನು ಶಿಕ್ಷಣ ಸಚಿವನಾಗಿದ್ದಾಗ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಸ್ಕರ್ಟ್ & ಶರ್ಟ್ ಸಮವಸ್ತ್ರದ ಬದಲಿಗೆ ಚೂಡಿದಾರ್ ಸಮವಸ್ತ್ರ ಜಾರಿಗೊಳಿಸಿದ್ದೆ. ಪ್ರತಿ ಧರ್ಮದಲ್ಲೂ ವಯಸ್ಸಿಗನುಗುಣವಾಗಿ ವಸ್ತ್ರ ಧರಿಸುವುದು ಸರ್ವೇ ಸಾಮಾನ್ಯ. ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಶಿಕ್ಷಣ ರಾಜ್ಯ ಸರ್ಕಾರದ ಕರ್ತವ್ಯ. ಉಡುಪಿ ಕಾಲೇಜು ಪ್ರಾಂಶುಪಾಲರ ನಡೆ ಮಕ್ಕಳಲ್ಲಿ ಜಾತಿ ಬೇಧ ಹುಟ್ಟು ಹಾಕ್ತಿದೆ. ಇದು ಆತಂಕಕಾರಿ ಹಾಗೂ ಸಮಾಜಕ್ಕೆ ಮಾರಕವಾಗಿದೆ. ಪರಿಸ್ಥಿತಿ ಕೈ ಮೀರುವ ಮುನ್ನ ಆ ಪ್ರಾಂಶುಪಾಲರಿಗೆ ಸೂಕ್ತ ನಿರ್ದೇಶನ ನೀಡಿ, ಈ ವಿವಾದಕ್ಕೆ ರಾಜ್ಯ ಸರ್ಕಾರ ತೆರೆಯನ್ನು ಎಳೆಯಬೇಕು ಎಂದು ಸರ್ಕಾರಕ್ಕೆ ಪತ್ರದ ಮೂಲಕ ಶಾಸಕ ತನ್ವೀರ್ ಸೇಠ್ ಎಚ್ಚರಿಕೆ ನೀಡಿದ್ದಾರೆ.
Discussion about this post