ಬೆಂಗಳೂರು: ಕಾರನ್ನು ಅಡ್ಡಗಟ್ಟಿ ವ್ಯಕ್ತಿಯನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲದ ಆನೇಕಲ್ ಪಟ್ಟಣದ ವೆಂಕಟೇಶ್ವರ ಚಿತ್ರಮಂದಿರದ ಬಳಿ ನಡೆದಿದೆ.
ರಾಜಶೇಖರ್ ರೆಡ್ಡಿ ಕೊಲೆಯಾದ ದುರ್ದೈವಿಯಾಗಿದ್ದು, ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಮೂಲತಃ ಆಂಧ್ರಪ್ರದೇಶದ ರಾಜಶೇಖರ್ ಬ್ಯಾಗಡದೇನಹಳ್ಳಿ ಬಳಿಯ ಜಮೀನೊಂದರ ರಿಜಿಸ್ಟರ್ ವಿಚಾರಕ್ಕೆ ಸಂಬಂಧಪಟ್ಟಂತೆ ಕೋರ್ಟ್ಗೆ ಆಗಮಿಸಿದ್ದರು. ಈ ವೇಳೆ ಕಾರನ್ನು ಅಡ್ಡಗಟ್ಟಿದ ಹಂತಕರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಭೇಟಿ ನೀಡಿದ್ದು, ಆರೋಪಿಗಳ ಪತ್ತೆಗೆ ಎರಡು ತಂಡಗಳನ್ನು ರಚಸಿದ್ದಾರೆ.
ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ ಪೊಲೀಸರು, ರಾಜಶೇಖರ್ ರೆಡ್ಡಿ ಮೊಬೈಲ್ ನಂಬರ್ ಸಿಡಿಆರ್ ತೆಗೆದು ಪರಿಶೀಲನೆ ನಡೆಸಿದ್ದಾರೆ. ಕೊನೆಯ ಕರೆಗಳ ಪರಿಶೀಲನೆ ನಡೆಸುತ್ತಿರುವ ಪೊಲೀಸರು, ಕೊನೆಯದಾಗಿ ಯಾರು ಯಾರೊಂದಿಗೆ ರಾಜಶೇಖರ್ ರೆಡ್ಡಿ ಮಾತನಾಡಿರುವ ಎಲ್ಲಾ ಕಾಲ್ ಡೀಟೈಲ್ಸ್ ತೆಗೆದು ಪರಿಶೀಲನೆ ನಡೆಸಿದ್ದಾರೆ. ರಾಜಶೇಖರ್ ರೆಡ್ಡಿ ಯಾವ ಕಾರಣಕ್ಕಾಗಿ ವಕೀಲರನ್ನ ಭೇಟಿಯಾಗಿದ್ದರು. ಆರೋಪಿಗಳು ಎಸ್ಕೇಪ್ ಅಗಿರುವ ಮಾರ್ಗದ ಎಲ್ಲಾ ಸಿಸಿಟಿವಿಗಳ ಪರಿಶೀಲನೆ ನಡೆಸಿದ್ದಾರೆ.
Discussion about this post