ಮಹಾರಾಷ್ಟ್ರದ ಸೆಲ್ಸುರಾದಲ್ಲಿ ನಿನ್ನೆ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಶಾಸಕರೊಬ್ಬರ ಪುತ್ರ ಸೇರಿ 7 ಮೆಡಿಕಲ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ನಿನ್ನೆ ರಾತ್ರಿ 11.30 ರ ಸುಮಾರಿಗೆ ಸೆಲ್ಸುರಾ ಬಳಿ ಹೋಗುತ್ತಿದ್ದಾಗ ಪ್ರಾಣಿಯೊಂದು ರಸ್ತೆಗೆ ಏಕಾಏಕಿಯಾಗಿ ಎಂಟ್ರಿಕೊಟ್ಟ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದೆ.
ಪರಿಹಾರ ಘೋಷಿಸಿದ ಕೇಂದ್ರ ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರ 2 ಲಕ್ಷ ರೂಪಾಯಿ ಪರಿಹಾರ ನೀಡೋದಾಗಿ ಘೋಷಣೆ ಮಾಡಿದೆ.
ಮಾತ್ರವಲ್ಲ ಗಾಯಗೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ 50 ಸಾವಿರ ರೂಪಾಯಿ ನೀಡೋದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದ್ದಾರೆ.
PM @narendramodi announced that Rs. 2 lakh each from PMNRF would be given to the next of kin of those who have lost their lives in the accident near Selsura. Those who are injured would be given Rs. 50,000.
— PMO India (@PMOIndia) January 25, 2022
ಪ್ರಾಣಿಯೊಂದು ರಸ್ತೆ ಮಧ್ಯೆ ಬಂದ ಹಿನ್ನೆಲೆಯಲ್ಲಿ ಅದನ್ನು ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ. ಪರಿಣಾಮ ಕಾರು ಅಲ್ಲೇ ಪಕ್ಕದಲ್ಲಿದ್ದ ಹಳ್ಳಕ್ಕೆ ಬಿದ್ದಿದ. ಘಟನೆಯಲ್ಲಿ ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತನಿಖೆಯನ್ನ ಆರಂಭಿಸಿದ್ದೇವೆ ಎಂದು ಎಸ್ಪಿ ಪ್ರಶಾಂತ್ ಹೊಲ್ಕರ್ ತಿಳಿಸಿದ್ದಾರೆ.
ದುರ್ಘಟನೆಯಲ್ಲಿ ತಿರೊರಾ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ವಿಜಯ್ ಅವರ ಪುತ್ರ ಅವಿಶ್ಕರ್ ಮೃತಪಟ್ಟಿದ್ದಾರೆ. ನೀರಜ್ ಚೌವ್ಹಾಣ್, ನಿತೇಶ್ ಸಿಂಗ್, ವಿವೇಕ್ ನಂದನ್, ಪ್ರತ್ಯುಶ್ ಸಿಂಗ್, ಶುಭಮ್ ಜೈಸ್ವಾಲ್, ಪವನ್ ಶಕ್ತಿ ಮೃತ ಮೆಡಿಕಲ್ ವಿದ್ಯಾರ್ಥಿಗಳು.
Discussion about this post