ಬೆಂಗಳೂರು: ನೈಸ್ ರಸ್ತೆಯಲ್ಲಿ ಜವರಾಯ ನಿನ್ನೆ ರಾತ್ರಿ ತನ್ನ ಅಟ್ಟ ಹಾಸ ಮೆರೆದಿದ್ದಾನೆ. ಸೇಫ್ ಅಗಿ ತಾವು ಹೋಗೊ ಜಾಗವನ್ನ ಸೇರ್ಕೋ ಬೇಕು ಅಂತಿದ್ದವರು ಮಸಣ ಸೇರಿದ್ದಾರೆ. ಡಿಕ್ಕಿ ರಭಸಕ್ಕೆ ಕಾರಿನಲ್ಲಿದ್ದವರ ದೇಹವು ಮಾಂಸದ ಮುದ್ದೆಯಂತಾಗಿತ್ತು. ಅಪಘಾತದ ಭೀಕರತೆ ನಿಜಕ್ಕೂ ಎದೆ ಝಲ್ ಎನಿಸುವಂತಿತ್ತು.
ಮೊಹಮ್ಮದ್ ಫಾದಿಲ್ (25), ಶಿಲ್ಪಾ (30), ಅಭಿಲಾಶ್ (25) ಮೃತರು. ಓರ್ವ ಯುವತಿಯ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ಭೀಕರ ಸರಣಿ ಅಪಘಾತ ನಡೆದಿದ್ದು ನೈಸ್ ರಸ್ತೆಯಲ್ಲಿ. ರಸ್ತೆ ದುರಸ್ತಿ ಕಾರ್ಯದಿಂದ ಟ್ರಾಫಿಕ್ ಜಾಮ್ ಆಗಿತ್ತು. ಹಾಗಾಗಿ ಸ್ಲೋ ಮೂವಿಂಗ್ ಟ್ರಾಫಿಕ್ ಇತ್ತು. ಒಂದರ ಹಿಂದೊಂದು ವಾಹನಗಳು ನಿಂತಿದ್ವೂ ಅಗ ಯಮರೂಪಿಯಾಗಿ ಬಂದ ಲಾರಿ ವ್ಯಾಗನರ್ ಕಾರಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಅ ಕಾರು ಮುಂದಿದ್ದ ಟುಯೋಟಾ ಕ್ವಾಲಿಸ್ ಕಾರಿಗೆ ಹಾಗೆ ಪಕ್ಕದಲ್ಲಿದ್ದ ಸ್ವಿಪ್ಟ್ ಕಾರಿಗೆ ಗುದ್ದಿದೆ. ಕ್ವಾಲಿಸ್ ಕಾರು ಮುಂದೆ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ..ಹೀಗೆ ಸರಣಿಯಾಗಿ 2 ಲಾರಿಗಳಿಗೆ ಡಿಕ್ಕಿಯಾಗಿದೆ.
ಬನ್ನೇರುಘಟ್ಟ ಮಾರ್ಗದಿಂದ ತುಮಕೂರು ರಸ್ತೆ ಕಡೆ ಹೊರಟಿದ್ದ ವ್ಯಾಗನರ್ ಕಾರಿನಲ್ಲಿ ಇಬ್ಬರು ಪುರುಷರು ಇಬ್ಬರು ಮಹಿಳೆಯರು ಒಟ್ಟು ನಾಲ್ಕು ಜನ ಪ್ರಯಾಣಿಸ್ತಿದ್ರೂ. ಅ ಕಾರಿಗೆ ಲಾರಿ ಬಂದು ಡಿಕ್ಕಿ ಹೊಡೆದ ರಭಸಕ್ಕೆ ಕಾರು ನುಜ್ಜು ಗುಜ್ಜಾಗಿತ್ತು..ಅ ನಾಲ್ವರು ಸ್ಥಳದಲ್ಲೇ ಉಸಿರು ಚೆಲ್ಲಿದ್ರೂ.. ಮೃತರಲ್ಲಿ ಇಬ್ಬರ ಗುರುತು ಪತ್ತೆಯಾಗಿದ್ದು ಶಿಲ್ಪಾ ಮತ್ತು ಫಾಜಿಲ್ ಎಂದು ಗುರುತಿಸಲಾಗಿದೆ.. ಇನ್ನೂ ಅ ಕಾರಿನ ಮುಂದೆ ಚಲಿಸುತ್ತಿದ್ದ ಕ್ವಾಲಿಸ್ ಗಾಡಿಯಲ್ಲೂ ಕೂಡ ನಾಲ್ವರೂ ಪ್ರಯಾಣಿಸ್ತಿದ್ರೂ. ಅ ನಾಲ್ವರಿಗೂ ಗಂಭೀರ ಗಾಯಗಳಾಗಿದ್ದು ಸ್ಥಿತಿ ಚಿಂತಜನಕವಾಗಿದೆ.. ಅವರೆಲ್ಲರನ್ನೂ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನೂ ಅ ಸ್ಪಿಪ್ಟ್ ಕಾರಿನಲ್ಲಿದ್ದ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಗಿದ್ದು.. ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ
ಅಪಘಾತವಾಗ್ತಿದ್ದಂತೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಕುಮಾರ ಸ್ವಾಮಿ ಲೇ ಔಟ್ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಲಾರಿ ಚಾಲಕನಿಗೆ ಶೋಧ ಕಾರ್ಯ ನಡೆಸಿದ್ದಾರೆ. ಮೇಲ್ನೋಟಕ್ಕೆ ಲಾರಿ ಚಾಲಕನ ಅಜಾಗರುಕತೆಯಿಂದ ಅಪಘಾತ ನಡೆದಿದೆ ಎನ್ನುವುದು ಸ್ಪಷ್ಟವಾಗಿದೆ. ತನಿಖೆಯ ನಂತರದಲ್ಲಿ ಅಪಘಾತಕ್ಕೆ ನಿಖರ ಕಾರಣ ತಿಳಿದು ಬರಬೇಕಿದೆ.
Discussion about this post