ಶಿರಸಿ: ಮನೆಯ ಪೊಟರೆಯೊಳಗೆ ಅವಿತಿದ್ದ 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮತ್ತಿಘಟ್ಟ ಮಸಗುತ್ತಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪುರುಷೋತ್ತಮ ಗೌಡ ಮನೆಯ ಪೊಟರೆಯಲ್ಲಿ ಬರೋಬ್ಬರಿ 14 ಅಡಿ ಉದ್ದದ ಕಾಳಿಂಗ ಸರ್ಪ ಅಡಗಿ ಕುಳಿತಿತ್ತು.
ಇನ್ನು ವಿಷಯ ತಿಳಿದ ತಕ್ಷಣ ಉರಗ ತಜ್ಞ ಪ್ರಶಾಂತ ಹುಲೇಕಲ್ ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಪ್ರಶಾಂತ್ಗೆ ಅರಣ್ಯ ರಕ್ಷಕ ಮಿಥುನ್ ಹಿರೇಮಠ್ ಸಹ ಸಾಥ್ ನೀಡಿದ್ದಾರೆ.
Discussion about this post