ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್, ಈಗ ಪ್ಯಾನ್ ಇಂಡಿಯಾ ಸ್ಟಾರ್. ‘ಪುಷ್ಪ’ ಸಿನಿಮಾ ನಂತರ ಅಲ್ಲು ಅರ್ಜುನ್ ರೇಂಜ್ ಫುಲ್ ಜೇಂಜ್ ಆಗಿದೆ. ಮಿಶ್ರ ಪ್ರತಿಕ್ರಿಯೇ ನಡುವೆಯೂ ‘ಪುಷ್ಪ’ ಸಿನಿಮಾ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇನ್ನು ಮುಂದೆ ಬರುವ ಅಲ್ಲು ಅರ್ಜುನ್ ನಟನೆಯ ಎಲ್ಲಾ ಸಿನಿಮಾಗಳೂ ಪ್ಯಾನ್ ಇಂಡಿಯಾ ಸಿನಿಮಾಗಳೇ ಆಗಿರುತ್ತದೆ.
ಹಾಗಾಗಿ ಎಲ್ಲಾ ವುಡ್ಗಳ ನಿರ್ದೇಶಕರು ಅಲ್ಲು ಅರ್ಜುನ್ ಮನೆ ಮುಂದು ಕ್ಯೂ ನಿಂತಿದ್ದಾರೆ.
ಅದೃಷ್ಟ ಬದಲಿಸಿದ ಪುಷ್ಪ
ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ, ಕಾಲಿವುಡ್ನ ಖ್ಯಾತ ಮತ್ತು ಯುವ ನಿರ್ದೇಶಕ ಅಟ್ಲಿ ಮತ್ತು ಅಲ್ಲು ಅರ್ಜುನ್ ಕಾಂಬಿನೇಶಷನ್ನಲ್ಲಿ ಒಂದು ಸಿನಿಮಾ ಬರಲಿದೆಯಂತೆ. ಅಲ್ಲು ಮತ್ತು ಅಟ್ಲಿ ಹೊಸ ಸಿನಿಮಾದ ಕುರಿತು ಒಂದು ಸುತ್ತಿನ ಮಾತುಕಥೆಯೂ ಮುಗಿದಿದ್ದು, ಅಲ್ಲು ಅರ್ಜುನ್ಗೂ ಕಥೆ ಇಷ್ಟ ಆಗಿದೆಯಂತೆ. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಕಥೆಯಾಗಿ ಮೂಡಿಬರಲಿದೆಯಂತೆ.
‘ಪುಷ್ಪ’ ಸಿನಿಮಾದ ನಂತರ ಅಲ್ಲು ಅರ್ಜುನ್ ಕ್ರೇಜ್ ಜೊತೆಗೆ ಸಂಭಾವನೆ ಕೂಡ ಹೆಚ್ಚಾಗಿದೆ.’ಪುಷ್ಪ’ ಸಿನಿಮಾಗಾಗಿ ಅಲ್ಲು ಎಷ್ಟು ಸಂಭಾವನೆ ಪಡೆದರೋ ಗೊತ್ತಿಲ್ಲಾವಾದರೂ, ಅಟ್ಲಿ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಸಿನಿಮಾಗಾಗಿ ಬರೋಬ್ಬರಿ 100 ಕೋಟಿ ಸಂಭಾವನೆ ಪಡೆಯಲಿದ್ದಾರಂತೆ ಅಲ್ಲು ಅರ್ಜುನ್.
ಅಲ್ಲು ಮತ್ತು ಅತ್ತಿಲಿ ಮುಂದಿನ ಸಿನಿಮಾಗೆ ಲೈಕಾ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದ್ದು, ಅಲ್ಲು ಅರ್ಜುನ್ಗೆ 100 ಕೋಟಿ ಸಂಭಾವನೆ ನೀಡುತ್ತಾ ಅನ್ನೋದೆ ದೊಡ್ಡ ಪ್ರಶ್ನೆ ಆಗಿ ಉಳಿದಿದೆ. ಇನ್ನೂ ಅಟ್ಲಿ ಟಾಲಿವುಡ್ ಯಂಗ್ ಆಯಂಡ್ ಸಕ್ಸಸ್ಪುಲ್ ನಿರ್ದೇಶಕ. ರಾಜಾ ರಾಣಿ, ತೇರಿ, ಮರ್ಸೆಲ್, ಬಿಗಿಲ್ ನಂತಹ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ. ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ಗೆ 2 ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ. ಮಾಡಿದ್ದು ಕೇವಲ 7 ಸಿನಿಮಾಗಳಾದರೂ ಬಾಲಿವುಡ್ಗೂ ಎಂಟ್ರಿ ಕೊಡುತ್ತಿದ್ದಾರೆ. ಸೋಲಿನ ಸರಮಾಲೆ ಜೊತೆ ಅಂಟಿಕೊಂಡಿರುವ ಶಾರುಖ್ ಖಾನ್ಗೆ ಒಂದು ಭರ್ಜರಿ ಹಿಟ್ ಕೊಡಲು ಅಟ್ಲಿ ಪ್ಲಾನ್ ಮಾಡಿದ್ದಾರೆ. ಶಾರುಖ್ ಮತ್ತು ಅಟ್ಲಿ ಮುಂದಿನ ಸಿನಿಮಾಗೆ ‘ಲಯನ್’ ಅಂತಾ ಟೈಟಲ್ ಇಡಲಾಗಿದೆ. ಆದರೆ ಇದು ಇನ್ನೂ ಪಕ್ಕಾ ಆಗಿಲ್ಲ. ಹಾಗಾಗಿ ಅಲ್ಲು ಅರ್ಜುನ್, ಅಟ್ಲಿ ಮೇಲೆ ನಂಬಿಕೆ ಇಟ್ಟು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಅಲ್ಲು ಅರ್ಜುನ್ ಮತ್ತು ಅಟ್ಲಿ ಭೇಟಿಯಾಗಿರುವು ನಿಜವಾದರೂ ಇದರ ಬಗ್ಗೆ ಅಲ್ಲು ಅರ್ಜುನ್ ಆಗಲಿ ಅಥವಾ ಅಟ್ಲಿ ಆಗಲಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ‘ಪುಷ್ಪ’ ಪಾರ್ಟ್-2 ನಲ್ಲಿ ಬ್ಯುಸಿಯಾಗಿರುವ ಅಲ್ಲು ಯಾವಾಗ ಕಾಲಿವುಡ್ ಅಡ್ಡ ಸೇರಲಿದ್ದಾರೆ ಎಂದು ಕಾದು ನೋಡಬೇಕಿದೆ.
Discussion about this post