ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 10 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ ಅಂತಾ ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.
ಟ್ವೀಟ್ ಮಾಡಿ ಮಾಹಿತಿ ನೀಡಿರುವ ಸುಧಾಕರ್, ನಿನ್ನೆ ಮತ್ತೆ 10 ಒಮಿಕ್ರಾನ್ ಕೇಸ್ ಪತ್ತೆ ಆಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 76ಕ್ಕೆ ಏರಿಕೆ ಆಗಿದೆ.
ನಿನ್ನೆ ಪತ್ತೆಯಾದ 10 ಕೇಸ್ಗಳಲ್ಲಿ 8 ಮಂದಿ ಸೋಂಕಿತರು ಬೆಂಗಳೂರಲ್ಲಿ ಇದ್ದಾರೆ. ಇನ್ನೆರಡು ಸೋಂಕಿತರು ಧಾರವಾಡದಲ್ಲಿದ್ದಾರೆ ಎಂದು ತಿಳಿಸಿದ್ದಾರೆ
ಮತ್ತೊಂದು ಕಡೆ, ಭಾರತ, ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಸಜ್ಜಾಗಿದೆ. ಇಂದಿನಿಂದ ದೇಶಾದ್ಯಂತ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲಾಗ್ತಿದೆ. ರಾಜ್ಯದಲ್ಲೂ ಮಕ್ಕಳಿಗೆ ಲಸಿಕೆ ನೀಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಇಂದು ಬೆಳಗ್ಗೆ 9:30ಕ್ಕೆ ಮಕ್ಕಳ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಸಿಎಂ ಅಧಿಕೃತ ಚಾಲನೆ ನೀಡಲಿದ್ದಾರೆ.
Discussion about this post