ಮದ್ದೂರು ತಾಲೂಕಿನಲ್ಲಿ ಕೊಂಡೋತ್ಸವ ವೇಳೆ ಭಾರಿ ಅವಘಡ..!
ಮನೆ ತಾರಸಿ ಕುಸಿದು ಓರ್ವ ಮಹಿಳೆ ಸಾವು, 40 ಜನರಿಗೆ ಗಾಯ
ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಮುಂಜಾನೆ ಘಟನೆ
ಹುಲಿಗೆರೆಪುರದ ಮಾದೇಗೌಡ ಎಂಬುವರ ನಿವಾಸದ ತಾರಸಿ ಕುಸಿತ
ಗ್ರಾಮದಲ್ಲಿ ನಡೆಯುತ್ತಿದ್ದ ಬಸವೇಶ್ವರ ದೇವಸ್ಥಾನದ ಕೊಂಡೋತ್ಸವ
ಕೊಂಡೋತ್ಸವ ನೋಡಲು ತಾರಸಿಗೆ ಏರಿದ್ದ 50ಕ್ಕೂ ಹೆಚ್ಚು ಜನ
ಜನರ ಭಾರ ತಾಳಲಾರದೆ ಕುಸಿದ ಮನೆ ತಾರಸಿಯ ಒಂದು ಭಾಗ
ಘಟನೆಯಲ್ಲಿ ಹುಲಿಗೆರೆಪುರ ಗ್ರಾಮದ ಪುಟ್ಟಲಿಂಗಮ್ಮ (50) ಸಾವು
40ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ
Discussion about this post